ಈ ತನಕ ನನ್ನ ಲೇಖನಗಳನ್ನು ಪ್ರಕಟಿಸಿದ ಪತ್ರಿಕೆಗಳ ಹಾಗೂ ಸ್ಮರಣ ಸಂಚಿಕೆಗಳ ಸಂಪಾದಕರುಗಳು, ಹಾಗೂ ನನ್ನ ಬರವಣಿಗೆಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಟ್ಟ ಶಿಕ್ಷಣ ಸಂಸ್ಥೆಯವರು, ಸಂಘ ಸಂಸ್ಥೆಯವರು ಈ ಕೃತಿ ಹೊರಬರುವಲ್ಲಿ ಕಾರಣಕರ್ತರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ನನ್ನ ಬರವಣಿಗೆಗಳಿಗೆ ಪ್ರೋತ್ಸಾಹ ಕೊಡುತ್ತಿರುವ ಕರ್ನಾಟಕ ತಿಯೊಲಾಜಿಕಲ್ ಕಾಲೇಜ್‌ಗೆ ಮತ್ತು ಎಲ್ಲ ಸಹೋದ್ಯೋಗಿಗಳಿಗೂ, 2015-2017 ಸಾಲಿನ 'ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ'ಯ ಅಧ್ಯಕ್ಷರಾದ ಎ.ಸಿ.ಭಂಡಾರಿ, ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಅಕಾಡೆಮಿಯ ಸದಸ್ಯರು ಹಾಗೂ ಎಲ್ಲಾ ಉದ್ಯೋಗಿಗಳು, ಗುಡ್ಡೆ, ಮಡಿಕೇರಿ ಗುಡ್ಡೆ, ಬಲ್ಮಠ, ವಾಮಂಜೂರು ಸಭೆಯ ಸದಸ್ಯರಿಗೆ, "ತುಳು ಪರಿಷತ್' ಹಾಗೂ 'ಕುರಲ್ ಇಷ್ಟೆರ್ ಕುಡ್ಲ'ದ ನನ್ನ ಎಲ್ಲ ಮಿತ್ರರು, ಕೆ.ಟಿ.ಸಿ. ಪತ್ರಾಗಾರದಲ್ಲಿ ಸಂಶೋಧಕರಾಗಿ ನನ್ನ ಮಿತ್ರರಾದ ಸಾಹಿತಿಗಳು, ಸಂಶೋಧಕರುಗಳಾದ ನನ್ನ ಎಲ್ಲ ಅತ್ಮೀಯರನ್ನು ಇಲ್ಲಿ ನೆನೆಯುವುದು ಯುಕ್ತವೆನಿಸುತ್ತದೆ. ನನ್ನ ಬರವಣಿಕೆಗಳಲ್ಲಿ ಸದಾ ನೆರವಾಗುತ್ತಿರುವ ಸಹೋದರ ಲೆನಿನ್ ಅಮ್ಮನ್ನರವರಿಗೆ, ಪ್ರಕಾಶಕರಾದ ಡಾ.ಅಂಕನಹಳ್ಳಿ ಪಾರ್ಥ ಅವರಿಗೆ, ಅಂದವಾಗಿ ಮುದ್ರಿಸಿದ ಮುದ್ರಕರಾದ ಅನ್ನಪೂರ್ಣೇಶ್ವರಿ ಪ್ರಿಂಟರ್‌ರವರಿಗೆ, ಮುಖಚಿತ್ರ ಬರೆದ ಗಂಗರಾಜು ಎನ್ ಮತ್ತೀಕೆರೆ ಅವರಿಗೆ ಮುನ್ನುಡಿ ಮತ್ತು ಬೆನ್ನುಡಿ ಬರೆದು ಓದುಗರಿಗೆ ಪುಸ್ತಕವನ್ನು ಪರಿಚಯಿಸಿದ ನನ್ನ ಸಂಶೋಧನಾ ಮಿತ್ರ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಡಾ.ಎಂ.ಎಸ್.ದುರ್ಗಾಪ್ರವೀಣ್ ರವರಿಗೆ ನನ್ನ ನಮನಗಳು.
ನನ್ನ ತಂದೆಯವರಾದ ದಿ. ಜೇಮ್ಸ್ ರಮಣ ಅಮ್ಮನ್ನರವರು ಶಿಕ್ಷಕ ವೃತ್ತಿಯಲ್ಲಿದ್ದವರು. ನನ್ನ ಓದು, ಹವ್ಯಾಸಗಳಿಗೆ ಅವರೇ ಕರ್ತೃ ಮತ್ತು ನನ್ನ ತಾಯಿ ನನಗೆ ಹಲವಾರು ಹವ್ಯಾಸಗಳನ್ನು ಕಲಿಸಿದ ಅಮ್ಮನಾಗಿದ್ದು ಅವರ ಸವಿನೆನಪಿಗಾಗಿ ಈ ಕೃತಿಯನ್ನು ಅರ್ಪಿಸುತ್ತಿದ್ದೇನೆ. ನನ್ನ ಬದುಕು ಬರವಣಿಗೆ, ಹವ್ಯಾಸಗಳಲ್ಲಿ ಯಾವಾಗಲೂ ನನ್ನೊಂದಿಗೆ ಸಹಕಾರ ನೀಡುತ್ತಿರುವ ತಮ್ಮಂದಿರು, ಅಣ್ಣಂದಿರು, ಅತ್ತಿಗೆಯಂದಿರು ಅಕ್ಕ, ಭಾವ ಮತ್ತೆಲ್ಲ ಕುಟುಂಬವರ್ಗದವರಿಗೂ, ಪತ್ನಿ ಐಲಿನ್ ಮಕ್ಕಳಾದ ಶೆರಿಲ್, ರಂಜಿತ್, ಅಳಿಯ ಪ್ರಶಾಂತ್‌ರಿಗೆ ನನ್ನ ಕೃತಜ್ಞತೆಗಳು.
ತಪ್ಪು ಒಪ್ಪುಗಳಿಗೆ ಹೊರತಾಗಿರದ ಈ ಕೃತಿಯಲ್ಲಿ ನನ್ನ ಅಜ್ಞಾನದಿಂದ ನುಸುಳಿದ ಭಿನ್ನ ವಿಭಿನ್ನ ಮಾಹಿತಿಗಳಿದ್ದರೆ ಓದುಗರು ಅದನ್ನು ತಿದ್ದಿ ಗಮನಕ್ಕೆ ತರುವುದಾದರೆ ಅದೇ ತಾವು ನನ್ನ ಬರಹಕ್ಕೆ ನೀಡುವ ಸಹಕಾರ.