ಮತ್ತೊಂದು ವಾರ ಕಾರ್ಖಾನೆಯಲ್ಲಿ ದುಡಿಯುವ ಹೆಣ್ಣು ಮಕ್ಕಳಿಗಾಗಿ
ತರಗತಿಗಳನ್ನು ನಡೆಸಲಾಗುತಿತ್ತು. ಇವುಗಳ ಸ್ಥಾಪನೆಗಾಗಿ ಮಹಿಳಾ
ಮಿಶನರಿಗಳೊಂದಿಗೆ ದೇಶೀಯ ಮಹಿಳೆಯರೂ ನಾಯಕತ್ವ ವಹಿಸಿಕೊಂಡಿರುತ್ತಾರೆ.
ಶ್ರೀಮತಿ ಎ. ಶೋಸ್ಟರ್ ನಾಯಕತ್ವದಿಂದ ಬಾಸೆಲ್ ಮಿಶನ್ ಹೋಮ್ ಇಂಡಸ್ಟ್ರಿ &
ಕ್ರಾಸ್ ಸ್ವಿಚ್ ಇಂಡಸ್ಟ್ರಿ ತೆರೆಯಲಾಗಿದ್ದು ಮಹಿಳಾ ಮಿಶನರಿಗಳೇ ಇದನ್ನು
ನಡೆಸುತ್ತಿದ್ದರು.
ಬಾಸೆಲ್ ಮಿಶನ್ ಪ್ರಾರಂಭಿಸಿದ ಸೇವೆಯನ್ನು ಮುಂದುವರಿಸಲೋ
ಎಂಬಂತೆ ಕಾಸೆಸ್ ಸಂಸ್ಥೆ ಉಗಮವಾಯಿತು. 1972 ರಲ್ಲಿ ಡಾ. ಸಿ.ಡಿ. ಜತ್ತನ್ನರವರ
ನಾಯಕತ್ವದಲ್ಲಿ ಕಾಸೆಸ್ ಸಂಸ್ಥೆಯ ಅಡಿದಾವರೆಯಲ್ಲಿ ಬಲ್ಮಠ ಸರ್ವೀಸ್ ಲೀಗ್
ಎಂಬ ಸಂಸ್ಥೆಯೊಂದು ಪ್ರಾರಂಭಗೊಂಡು ಇದರ ಒಂದು ವಿಭಾಗವಾಗಿ 1974ರಲ್ಲಿ
ಬಲ್ಮಠ ಸ್ವಿಚ್ ಕ್ರಾಪ್ಟ್ ಸಂಸ್ಥೆಯು ಪ್ರಾರಂಭವಾಗಿ ಹೊಲಿಗೆ, ಎಂಬ್ರಾಯಿಡರಿ ತರಬೇತಿ
ನೀಡುವ ಸಂಸ್ಥೆಯಾಗಿ ಮುಂದುವರಿದು ಪ್ರಸ್ತುತ ಕಾಸೆಸ್ ಐ.ಟಿ.ಐ. ಹೊಲಿಗೆ
ತರಬೇತಿ ಕೇಂದ್ರವಾಗಿ ಮುಂದುವರಿಯುತ್ತಿದೆ. ಕಳೆದ 44 ವರ್ಷಗಳಿಂದ
ಮುನ್ನಡೆಯುತ್ತಿದ್ದು ಸಾವಿರಾರು ಹೆಣ್ಣುಮಕ್ಕಳು, ಹೊಲಿಗೆ ಶಿಕ್ಷಕಿಯರಾಗಿ, ಸ್ವಂತ
ದುಡಿಮೆಯನ್ನು ಪ್ರಾರಂಭಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಸಾರಿಫಾಲ್,
ಸಾರಿಗೊಂಡಿ,ಬ್ಲೌಸ್ ಮೇಕಿಂಗ್, ಎಂಬ್ರಾಯ್ಡರಿ, ಕ್ಲರ್ಜಿ ಸ್ಟೋಲ್ ತಯಾರಿ ಕ್ಷೇತ್ರದಲ್ಲಿ
ಹೆಸರುವಾಸಿಯಾಗಿದೆ.
ಜಿಲ್ಲೆಯಲ್ಲಿ ದೇಶೀಯ ಕ್ರೈಸ್ತರ ನಾಯಕತ್ವದಲ್ಲಿ ಸಹಾಯಕ ಸಂಘಗಳು : 1900ರಿಂದಲೇ ಮಿಶನರಿಗಳು ಸ್ಥಾಪಿಸಿದ ಸಂಘ ಸಂಸ್ಥೆಗಳು ಮುನ್ನಡೆಯಲು ಪಣತೊಟ್ಟ ಹಲವು ದೇಶೀಯ ನಾಯಕರುಗಳಲ್ಲಿ ನಾವು ಸ್ಥಳೀಕವಾಗಿಯೇ ವಿದೇಶಿ ನೆರವಿಲ್ಲದೆ ಬದುಕಲು ಕಲಿಯಬೇಕು ನಮ್ಮಿಂದಲೇ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ಸಿಗಬೇಕು ಎನ್ನುವ ಛಲ ಇತ್ತು. 1886ರಲ್ಲಿ ಕೆನರಾ ಕ್ರಿಶ್ಚನ್ ಪ್ರೊವಿಡೆಂಟ್ ಫಂಡ್ ಎಂಬ ಸಂಸ್ಥೆಯೊಂದು ಸ್ಥಾಪನೆಯಾಗಿ ಸುಮಾರು 50 ವರ್ಷಗಳವರೆಗೆ ಮುನ್ನಡೆಯುತ್ತಿತ್ತು. ಮರಣ ಸಂದರ್ಭದಲ್ಲಿ, ಅಸೌಖ್ಯದಲ್ಲಿದ್ದಾಗ ನೆರವು ನೀಡುವುದಕ್ಕಾಗಿ ಈ ಸಂಸ್ಥೆಯಲ್ಲಿ ವ್ಯವಸ್ಥೆಯಿತ್ತು. ತುಳುನಾಡಿನ (ದ.ಕ. ಮತ್ತು ಉಡುಪಿ) ಸುಮಾರು 500 ಮಂದಿ ಸದಸ್ಯರಿದ್ದರು. ಕೆಲಸ ಮಾಡುವವರು ರೂಪಾಯಿ ಒಂದರಂತೆ ಶುಲ್ಕ ತೆರಬೇಕಿತ್ತು. ಮಂಗಳೂರಿನಲ್ಲಿ 'ಕೆನರಾ ಕ್ರೈಸ್ತ ಉಪಾಧ್ಯಾಯರ ಕುಟುಂಬ ಸಹಾಯಕ ಸಂಘ' (1915) ಕೆನರಾ ಕ್ರೈಸ್ತ ವಿದ್ಯಾನಿಧಿ (1928) ಬಲ್ಮಠ ಕ್ರೈಸ್ತ ಬಡವರ ಸಂಘ(1951) ಮುಂತಾದವುಗಳು ಸ್ಥಾಪನೆಗೊಂಡು
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
97