Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/112

This page has been proofread.

ಬಂಗೇರರವರು ತಮ್ಮ ಮನೆಯಲ್ಲಿ “ಸ್ಟ್ಯಾನ್ಲಿ ಹೊಸೈರಿ” ಎಂಬ ಹೆಸರಿನಲ್ಲಿ 1965ರಲ್ಲಿ ಒಳ ಉಡುಪುಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದರು. ತಿರುಪುರದಿಂದ ಬಟ್ಟೆಗಳನ್ನು ಖರೀದಿಸಿ ಬನಿಯನ್, ಶಾರ್ಟ್ಸ್, ಸ್ಪೋಟ್ಸ್ ಬ್ರಾಗಳನ್ನು ತಯಾರಿಸುತ್ತಿದ್ದರು. 15 ವರ್ಷಗಳ ಕಾಲ ಉತ್ಪಾದನೆ ಮಾಡುತ್ತಿದ್ದ ಈ ಸಂಸ್ಥೆ ನೌಕರರ/ಕಚ್ಚಾಮಾಲುಗಳ ಕೊರತೆಗಳ ಸಮಸ್ಯೆಯಿಂದ ಉತ್ಪಾದನೆ ಮಾಡುವುದನ್ನು ನಿಲ್ಲಿಸಿ ತಿರುಪುರದಲ್ಲಿ ತಯಾರಿಸಿದ ಒಳ ಉಡುಪುಗಳನ್ನು ತರಿಸಿ ಸ್ಟ್ಯಾನ್ಲಿ ಹೊಸೈರಿ ಹೆಸರಿನಲ್ಲಿ ಮಾರಾಟ ಮಾಡಲು ಪ್ರಾರಂಭವಾಯಿತು. 1985ರಲ್ಲಿ ಸ್ಥಾಪಕರು ನಿಧನರಾದರೂ ಅವರ ಪತ್ನಿ ಉಳ್ಳಾಲ ಬಿ.ಇ.ಎಂ.ಶಾಲೆಯಲ್ಲಿ ಶಿಕ್ಷಕಿ/ ಮುಖ್ಯೋಪಾಧ್ಯಾಯಿನಿ ಆಗಿದ್ದ ರಾಷ್ಟ್ರ ಪ್ರಶಸ್ಥಿ ವಿಜೇತೆ ಶ್ರೀಮತಿ ಲೆಟಿಶಿಯಾ ಇವಾಂಜಲಿನ್‌ರವರು ಒಂದೆರಡು ನೌಕರರ ಮೂಲಕ ಆಮದು ಮಾಡಿಕೊಂಡ ಉತ್ಪನ್ನಗಳನ್ನು 2000ನೇ ಇಸವಿ ತನಕವೂ ಮಾರಾಟ ಮಾಡುವ ವ್ಯವಸ್ಥೆ ಮಾಡುತ್ತಿದ್ದರು.

ಬಲ್ಮಠ ಹೊಸೈರಿ: 1970ರಲ್ಲಿ ಕೋಮನ್‌ವೆಲ್ತ್‌ನವರು ನಡೆಸುತ್ತಿದ್ದ ಹೊಸೈರಿ ಸಂಸ್ಥೆ ಮುಚ್ಚಲ್ಪಟ್ಟು ಪ್ರಸ್ತುತ ಕುಮುದಾವತಿ ಕಟ್ಟಡವಿರುವ ಸ್ಥಳದಲ್ಲಿದ್ದ ಜಾಡುಕೋಣೆ ಎಂಬ ಹೆಸರಿನ ಕಟ್ಟಡವನ್ನೂ ಮತ್ತು ಈ ಪ್ರೆಸ್ ಇರುವ 1907ರಲ್ಲಿ ನಿರ್ಮಿಸಲ್ಪಟ್ಟ ನೆಯಿಗೆ ಕಾರ್ಖಾನೆಯ ಕಟ್ಟಡ ಸೇರಿ 3.50 ಎಕ್ರೆ ಸ್ಥಳವನ್ನು ರೆವೆ. ಸಿ.ಡಿ. ಜತ್ತನ್ನರವರ ನಾಯಕತ್ವದಲ್ಲಿ ಕಾಸೆಸ್ ಸಂಸ್ಥೆ ಪಡೆದುಕೊಂಡು ಅದೇ ಕಟ್ಟಡದಲ್ಲಿ 1978ರಿಂದ 'ಬಲ್ಮಠ ಹೊಸೈರಿ' ಎಂಬ ಸಂಸ್ಥೆಯೊಂದನ್ನು ಪ್ರಾರಂಭಿಸಿ ಒಳ ಉಡುಪುಗಳನ್ನೂ ಮಗ್ಗದ ಸೀರೆ, ಧೋತಿಗಳನ್ನು ತಯಾರು ಮಾಡುತ್ತಿತ್ತು. ಬನಿಯನ್ ತಯಾರಿಸುವ ಮಿಶನ್‌ಗಳು, ಎರಡು ಮಗ್ಗಗಳು ಇದ್ದವು. ಇಲ್ಲಿ ತಯಾರಾಗುವ ಉತ್ಪನ್ನಗಳನ್ನು ಮಾರಾಟ ಮಾಡಲು ಬಲ್ಮಠ ಗಾರ್ಮೆಂಟ್ ಶಾಪ್ ಎಂಬ ಹೆಸರಿನ ಮರಾಟ ಮಳಿಗೆಯೂ ಕಾರ್ಯಾಚರಿಸುತ್ತಿತ್ತು.

ಬಲ್ಮಠದಲ್ಲಿದ್ದ ಶ್ರೀಯುತ ಫ್ರೆಡ್ರಿಕ್ ಬಂಗೇರರವರು ಸುಮಾರು 15 ವರ್ಷಗಳ ಕಾಲ ತಿರುಪುರದಿಂದ ಬಟ್ಟೆಗಳನ್ನು ತರಿಸಿ ಬನಿಯನುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದುದು ಮಾತ್ರವಲ್ಲದೆ ಸಿದ್ಧಪಡಿಸಿದ ಒಳ ಉಡುಪು, ಬನಿಯನ್‌ಗಳನ್ನು ತರಿಸಿ ಮಾರಾಟ ಮಾಡಿಸುತ್ತಿದ್ದರು.

ಬಲ್ಮಠ ಕೈಗಾರಿಕಾ ಕೆಲಸಗಾರರ ಸಹಕಾರ ಸಂಘದ ಸ್ಥಾಪನೆ ಪ್ರೊಟೆಸ್ಟಂಟ್ ಕ್ರಿಶ್ಚನ್ ಸಹಕಾರ ಸಂಘವು 1939ರಲ್ಲಿ ಪ್ರಾರಂಭ ಮಾಡಿದ ಕೈಗಾರಿಕಾ ವಿಭಾಗವು 1954ರಿಂದ ಸ್ಥಗಿತಗೊಂಡಿತು. ಮಿಶನರಿಗಳ ಸೇವೆಯ ಮುಂದುವರಿ 100 0 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.