Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/119

This page has been proofread.

ಮಿಶನರಿ ಸಾಹಿತ್ಯ ಮಾಹಿತಿ ಕೋಶ ಡಾ. ಶ್ರೀನಿವಾಸ ಹಾವನೂರು-ಒಂದು ನೆನಪು

2002 ಅಗಸ್ಟ್‌ನಲ್ಲಿ ಭಾರತದಲ್ಲಿ ಅಲಭ್ಯವಾಗಿದ್ದ ಬಾಸೆಲ್ ಮಿಶನರಿಗಳ ಕೆಲವು ಕೃತಿಗಳು ಸ್ವಿಜರ್ಲೆಂಡಿನಿಂದ ಮೈಕ್ರೋ ಫಿಲ್ಟ್ ರೂಪವಾಗಿ ಮಂಗಳೂರಿನ ಕರ್ನಾಟಕ ತಿಯೊಲಾಜಿಕಲ್ ಕಾಲೇಜ್ ಗ್ರಂಥಾಲಯದ ಪತ್ರಾಗಾರ ವಿಭಾಗಕ್ಕೆ ಬಂದಾಗ ಬೆಂಗಳೂರಿಂದ ಆಗಮಿಸಿದ ಡಾ. ಹಾವನೂರರು 1963ರಿಂದ ನಡೆಸತೊಡಗಿದ್ದ ವಿದೇಶಿಯರ ಕೊಡುಗೆ ಸಂಶೋಧನೆಯ ಮುಂದುವರಿಕೆಯನ್ನು ಮತ್ತೊಮ್ಮೆ ಇಲ್ಲಿ ಪ್ರಾರಂಭಿಸಿದರು. ಮಿಶನರಿಗಳ ಕೃತಿಗಳ ಸಂಶೋಧನೆಗೆಂದೇ ಆಗಮಿಸಿದ ಹಾವನೂರರು ಸುಮಾರು 4 ವರ್ಷ ಇಲ್ಲಿಯೇ ನೆಲಸಿ ಕರ್ನಾಟಕ ತಿಯೋಲಾಜಿಕಲ್ ಕಾಲೆಜ್ ಗ್ರಂಥಾಲಯದ ಪತ್ರಾಗಾರ ವಿಭಾಗದ ಮಹತ್ವವನ್ನು ಮತ್ತೊಮ್ಮೆ ನಾಡಿಗೆಲ್ಲ ಪಸರಿಸಿದರು ಎನ್ನುವುದಕ್ಕೆ ಸಂಶಯವೇ ಇಲ್ಲ.

ಬಂದ ಕೃತಿಗಳ ಮೌಲ್ಯಮಾಪನ ಮಾಡಬೇಕು ಅವನ್ನು ಕಂಪ್ಯೂಟರ್‌ಗೆ ಅಳವಡಿಸಬೇಕು ಇವುಗಳನ್ನೆಲ್ಲಾ ಬೆಳಕಿಗೆ ತಂದು ಇವುಗಳಲ್ಲಿ ಸಂಶೋಧನೆ ನಡೆಯಬೇಕು ಎನ್ನುವುದೇ ಅವರ ಏಕೈಕ ಗುರಿ. ಮೈಕ್ರೋಫಿಲ್ಮೇನೋ ಬಂದಿದೆ ಅದನ್ನು ಓದಲು ರೀಡರ್ ಬೇಕಲ್ಲ, ಮುಂಬಯಿಗೆ ಹೋಗಿ ಸ್ನೇಹಿತರ ನೆರವಿನಿಂದ ಮೈಕ್ರೋಫಿಲ್ಡ್ ರೀಡರೊಂದನ್ನು ಹಿಡಿದುಕೊಂಡೇ ಬಂದರು. ಉಡುಪಿಯಿಂದ ಎಸ್. ಎ. ಕೃಷ್ಣಯ್ಯರನ್ನು ಕರೆಸಿ ತನಗೆ ವಿಷಯ ತುಂಬಲು ಒಂದು ಡಾಟ ತಯಾರಿಸಿ ಕೊಡಪ್ಪಾ ಎಂದು ಅದರಲ್ಲಿ ಏನೇನಿರಬೇಕು ಎಂದು ತನ್ನ ಕಂಪ್ಯೂಟರ್ ತಲೆಯಲ್ಲಿದ್ದ ಐಡಿಯಾಗಳನ್ನು ನೀಡಿ ಡಾಟ ಸಿದ್ಧ ಮಾಡಿಸಿಯೇ ಬಿಟ್ಟು ತಾನು ಮಾಡಲು ಹೊರಟ ಕಾರ್ಯವನ್ನು ಆರಂಭಿಸಿದರು.

ಗ್ರಂಥಾಲಯದಲ್ಲಿ ದೀರ್ಘ ಸೇವೆ ಸಲ್ಲಿಸಿದ ಇವರಿಗೆ ವರ್ಗೀಕರಣದ ಸಮಸ್ಯೆ ಇಲ್ಲ. ಪ್ರತಿ ಪುಸ್ತಕದ ಪರಿಚಯವಿದ್ದ ಇವರಿಗೆ ಅದು ಸಮಸ್ಯೆಯೂ ಅಲ್ಲ. ಗ್ರಂಥಾಲಯಕ್ಕೆ ಬಂದ ಸಂಶೋಧಕರಿರಲಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳೇ ಇರಲಿ ವಿಷಯ ಅರಸಿಕೊಂಡು ಬಂದಾಗ ಯಾವುದೇ ನಿರಾಕರಣೆಯಿಲ್ಲದೆ ಸಹಾಯ ಮಾಡುವ ಪ್ರವೃತ್ತಿ ಇವರದು. ಓದು, ಬರವಣಿಗೆ, ವರ್ಗೀಕರಣ, ಯಾವುದೇ ಇರಲಿ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

107