1841ರಲ್ಲಿ ತುಳುನಾಡಿನಲ್ಲಿ ಮೊದಲ ಪ್ರೆಸ್‌ನ್ನು ಸ್ಥಾಪಿಸಿ ಕಲ್ಲಚ್ಚಿನಲ್ಲಿ ತುಳುವಿನ ಮುದ್ರಣ ಆರಂಭಿಸಿ ಇವರು ತುಳು ಸಾಹಿತ್ಯಕ್ಕೆ ಪ್ರೇರಕರಾದರು. 1843ರಲ್ಲಿ ಕನ್ನಡದ ಮೊದಲ ಪತ್ರಿಕೆ 'ಮಂಗಳೂರ ಸಮಾಚಾರ' ಮುದ್ರಿಸಿದ ಇವರು ಮುದ್ರಣದ ಕ್ರಾಂತಿ ಮಾಡಿ ಲೆಟರ್‌ಪ್ರೆಸ್‌ನ್ನು ಬೆಳಕಿಗೆ ತಂದು ಮುದ್ರಣ ಕ್ಷೇತ್ರದಲ್ಲಿ ಕನ್ನಡ, ತುಳು, ಕೊಡವ, ಬಡಗ, ಮಲಯಾಳಂ ಸಾಹಿತ್ಯದಲ್ಲಿ ಮಹತ್ತರ ಸಾಧನೆ ಮಾಡಿರುತ್ತಾರೆ. 1874 ಬರ್ನೆಲನ ಲಿಪಿಶಾಸ್ತ್ರದ ಪುಸ್ತಕ, 1872ರಲ್ಲಿ ಗುಂಡರ್ಟ್‌ನ ಮಲಯಾಳಂ-ಇಂಗ್ಲಿಷ್ ನಿಘಂಟು, I872ರಲ್ಲಿ ಬ್ರಿಗೆಲ್‌ನ ತುಳು ವ್ಯಾಕರಣ, 1886ರಲ್ಲಿ ಮೆನ್ನರ್‌ನ 21 ಭೂತಗಳ ಪಾಡ್ಡನಗಳಿರುವ ಕೃತಿ, ತುಳು ಗಾದೆಗಳು, ಕನ್ನಡ ಪಂಚಾಂಗ, ವಿಚಿತ್ರ ವರ್ತಮಾನ ಸಂಗ್ರಹ, 1894ರಲ್ಲಿ ಕಿಟೆಲ್‌ರ ಕನ್ನಡ ಇಂಗ್ಲಿಷ್ ನಿಘಂಟು, 1883ರಲ್ಲಿ ಪ್ರಾನ್ಸಿಸ್ ಝೇವಿಯರ್‌ರವರ ಕೊಂಕಣಿ ನಿಘಂಟು ಮತ್ತು ಕೊಂಕಣಿ ವ್ಯಾಕರಣ, 1886ರಲ್ಲಿ ಮೆನ್ನರ್‌ನ ತುಳು ಇಂಗ್ಲಿಷ್ ನಿಘಂಟು ಹಾಗೂ 1888ರಲ್ಲಿ ಇಂಗ್ಲಿಷ್ ತುಳು ನಿಘಂಟು ಮುಂತಾದ ಮುದ್ರಣದಿಂದ ಪ್ರತಿಯೊಂದು ವಿಭಾಗದಲ್ಲಿಯೂ ಮೊದಲಿಗರೆನಿಸಿಕೊಂಡಿರುತ್ತಾರೆ.
186 ವರ್ಷಗಳ ಹಿಂದೆ ಸ್ಥಾಪನೆಗೊಂಡ ಧಾರ್ಮಿಕ ಸಂಸ್ಥೆಯೊಂದು ಜಿಲ್ಲೆಯ ವಿದ್ಯಾ ಕ್ಷೇತ್ರ, ವೈದ್ಯಕೀಯ, ಕಾರ್ಖಾನೆ, ಕೃಷಿ, ನೇಯಿಗೆ, ಮುದ್ರಣ, ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಸೇವೆಯನ್ನು ಮಾಡಿದೆ.ಮಂಗಳೂರಿನಲ್ಲಿ ಸ್ಥಾಪನೆಯಾದ ಕೇಂದ್ರವು ಮುಂದುವರೆಯುತ್ತಾ ಕದಿಕೆ, ಹಳೆಯಂಗಡಿ, ಬೊಲ್ಕ ಅಮ್ಮೆಂಬಳ, ಉಚ್ಚಿಲ, ಕಾರ್ನಾಡ್, ಕುತ್ಯಾರ್, ಸಾಂತೂರು, ಪಾಂಗಾಳ ಗುಡ್ಡೆ, ಪಾದೂರು, ಉದ್ಯಾವರ, ಅಂಬಾಡಿ, ಶಿರ್ವ, ಮಣಿಪುರ, ಕುರ್ಕಾಲ್, ಪಾದೂರು, ಬೈಲೂರು, ಕಾರ್ಕಳ, ಮೂಡಬಿದ್ರೆ, ಬೈಲೂರು, ಮುಡಾರ್, ಮುಲ್ಕಿ, ಸಂಕಲಕರಿಯ, ಉಡುಪಿ, ಮಲ್ಪೆ, ಚಾರ, ಹೊನ್ನಾವರ, ಹೆಬ್ರಿ, ಬನ್ನೂರು, ಕುಂದಾಪುರ, ಬೈಂದೂರು ಕಾರವಾರ, ಕುಮಟಾ, ಶಿರಸಿ, ಬೆಳ್ತಂಗಡಿ, ಉಜಿರೆ, ಬಂಟ್ವಾಳ, ಗುರುಪುರ, ಕಲ್ಯಾಣಪುರ, ಬಾರಕೂರು, ಬೇಕಲಕೊಟೆ, ಕಾಸರಗೋಡು, ಹೀಗೆ ಹಲವಾರು ಕಡೆಗಳಲ್ಲಿ ಸಭೆಗಳನ್ನು ಸ್ಥಾಪಿಸಿದರು ಹಾಗೂ ಸುಮಾರು 75 ಶಾಲೆಗಳನ್ನು ಪ್ರಾರಂಭಿಸಿದರು.
1865ರಲ್ಲಿ ಜಪ್ಪು, 1882ರಲ್ಲಿ ಕುದ್ರೋಳಿ, 1886ರಲ್ಲಿ ಮಲ್ಪೆ ಹೀಗೆ ತುಳುನಾಡಿನಲ್ಲಿ 3 ಹಂಚಿನ ಕಾರ್ಖಾನೆಗಳನ್ನು ಸ್ಥಾಪಿಸಿ ಇಂದಿಗೂ “ಮಂಗಳೂರು ಹಂಚು” ಎಂಬ ಹೆಸರು ಜಗತ್ತಿನಾದ್ಯಂತ ಪ್ರಚಲಿತದಲ್ಲಿದೆ. ಜಿಲ್ಲೆಯ ಜನರಿಗೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ ವಿದ್ಯಾಭ್ಯಾಸ ಕಲ್ಪಿಸಿಕೊಟ್ಟಿರುವುದು
02