Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/146

This page has not been proofread.

ಜನರು ಚೀನಿ-ತಿಬೇಟಿ ಭಾಷೆಗಳಿಗೆ ಸಂಬಂಧಿಸಿದ ಭಾಷೆಗಳನ್ನಾಡುವರು. ಈ ಭಾಷೆಗಳಿಗೂ ಮೇಲೆ ವಿವರಿಸಿದ ಮೂರು ವರ್ಗದ ಭಾಷೆಗಳಿಗೂ ಬಹುತರ ಸಂಬಂಧವಿಲ್ಲ; ಆದರೆ ದ್ರವಿಡ ಭಾಷೆಗಳಿಗೂ ಇವಕ್ಕೂ ಒಂದು ಸಂಗತಿಯಲ್ಲಿ ಸಾಮ್ಯವಿದ್ದದ್ದು ಕಂಡುಬರುತ್ತದೆ; ಅಂದರೆ ದ್ರವಿಡ ಭಾಷೆಯಂತೆ ಈ ಭಾಷೆಯಲ್ಲಿ ಒಂದು ಶಬ್ದಕ್ಕೆ ಮತ್ತೊಂದು ಶಬ್ದವನ್ನು ಸೇರಿಸಿ ಹೊಸ ಅರ್ಥವನ್ನು ಕೊಡುವ ಹೊಸ ಶಬ್ದಗಳನ್ನು ಹುಟ್ಟಿಸುವ ವಾಡಿಕೆಯುಂಟು. ದಕ್ಷಿಣ ಭಾಗದ ಮುಖ್ಯ ಭಾಷೆ: ನಾವಿರುವ ಸೀಮೆಯ ಮುಂಬಯಿ ಇಲಾಖೆಯ ದಕ್ಷಿಣ ಭಾಗವೂ ಕರ್ನಾಟಕದ ಉತ್ತರ ಭಾಗವೂ ಆಗಿರುತ್ತದೆ. ಕರ್ನಾಟಕ ಸೀಮೆಯಲ್ಲಿ ಮುಂಬಯಿ ಇಲಾಖೆಗೆ ಸೇರಿದ ಧಾರವಾಡ, ಬೆಳಗಾವ, ವಿಜಾಪುರ, ಉತ್ತರ ಕಾನಡಾ ಎಂಬ ನಾಲ್ಕು ಜಿಲ್ಲೆಗಳಲ್ಲದೆ, ಮೈಸೂರ ಸಂಸ್ಥಾನವೂ, ಮದ್ರಾಸ ಇಲಾಖೆಗೆ ಸೇರಿದ ದಕ್ಷಿಣ ಕನ್ನಡ ಜಿಲ್ಲೆಯೂ, ಕೊಯಿಮುತ್ತೂರ ಬಳ್ಳಾರಿ ಜಿಲ್ಲೆಗಳ ಕೆಲವು ಭಾಗಗಳೂ, ನಿಜಾಮನ ರಾಜ್ಯದ ಪಶ್ಚಿಮ ಭಾಗವೂ ಬರುತ್ತವೆ. ಮುಂಬಯಿ ಇಲಾಖೆಗೆ ಸೇರಿದ ನಾಲ್ಕು ಕನ್ನಡ ಜಿಲ್ಲೆಗಳ ಒಟ್ಟು ಜನಸಂಖ್ಯೆ ಸುಮಾರು 33 ಲಕ್ಷವುಂಟು. ಇವರಲ್ಲಿ ಕನ್ನಡ ಮಾತನ್ನಾಡುವವರು ನೂರಕ್ಕೆ 73.7 ಇದ್ದಾರೆ. ಉಳಿದವರು ಮರಾಠಿ, ಹಿಂದುಸ್ತಾನಿ, ಕೊಂಕಣಿ ಮುಂತಾದ ಭಾಷೆಗಳನ್ನಾಡುವರು. ಕನ್ನಡವೆಂಬ ಹೆಸರು ಕರು (ಎತ್ತರ)ನಾಡು ಎಂಬ ದೇಶವಾಚಕ ಶಬ್ದದಿಂದ ಹುಟ್ಟಿದ್ದು, ಅದು ಈ ನಾಡಿನಲ್ಲಿ ನಡೆಯುವ ನುಡಿಗೆ ಬಂದಿರುವದೆಂತಲೂ, ಕರುನಾಡು ಎಂಬ ಶಬ್ದದಿಂದಲೇ ಸಂಸ್ಕೃತ ಪಂಡಿತರು ಕರ್ನಾಟ, ಕರ್ನಾಟಕಗಳೆಂಬ ಪದಗಳನ್ನು ಮಾಡಿಕೊಂಡಿರುವರೆಂತಲೂ ಭಾಷಾಭಿಜ್ಞರು ಊಹಿಸುತ್ತಾರೆ. ಕನ್ನಡವು ದ್ರವಿಡ ಭಾಷಾವರ್ಗಕ್ಕೆ ಸೇರಿದ್ದು, ಈ ವರ್ಗದಲ್ಲಿ ಕನ್ನಡವಲ್ಲದೆ ತಮಿಳ, ತೆಲಗು, ಮಲೆಯಾಳ, ತುಳು ಎಂಬ ನಾಲ್ಕು ತಿದ್ದುಪಡಿಯಾದ ಭಾಷೆಗಳೂ, ತೋಡ, ಕೋಟ, ಗೊಂಡ, ಖಂಡ ಇವೇ ಮೊದಲಾದ ಹಲವು ಕಾಡು ಜನರಾಡುವ ಕುಲ್ಲಕ ಭಾಷೆಗಳೂ ಬರುತ್ತವೆಂದು ಹಿಂದೆ ಹೇಳಿದೆ. ಇವುಗಳಲ್ಲಿ ಕನ್ನಡಕ್ಕೂ ತಮಿಳಕ್ಕೂ ಹೋಲಿಕೆ ವಿಶೇಷ; ತೆಲಗು ಕನ್ನಡ ನಾಡುಗಳು ಒಂದಕ್ಕೊಂದು ಸಮೀಪವಾದ್ದರಿಂದಲೂ ಇವೆರಡೂ ಬಹು ಕಾಲದ ವರೆಗೆ ಒಂದೇ ರಾಜ್ಯದಾಡಳಿತಕ್ಕೆ ಸೇರಿದ್ದರಿಂದಲೂ ತೆಲಗು ಕನ್ನಡ ಭಾಷೆಗಳಿಗೆ ಒಂದೇ 134 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...