Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/153

This page has been proofread.

ನ್ಯೂನತೆ, ಕ್ರೈಸ್ತ ಮತ ಪ್ರಚಾರದ ಮೂಲ ಉದ್ದೇಶವಿಟ್ಟುಕೊಂಡೇ ಶಾಲೆ ಪ್ರಾರಂಭಿಸಿರುವುದು ಸ್ಪಷ್ಟ. ಆದರೆ ಇದೇ ಉದ್ದೇಶಕ್ಕಾಗಿ ಶಾಲೆ ಸೀಮಿತವಾಗಿರುತ್ತಿದ್ದರೆ ಬ್ರಾಹ್ಮಣರ ವೇದಶಾಲೆ, ಮುಸಲ್ಮಾನರ ಮದ್ರಸಾಗಳಂತೆ ಈ ಶಾಲೆಗಳೂ ಕ್ರೈಸ್ತರಿಗೆಂದೇ ಇರುತ್ತಿದ್ದವು. ಆದರೆ ಸಾಮಾಜಿಕ ನ್ಯಾಯದ ಕಾಳಜಿ ಹೊಂದಿದ ಅವರ ಮನೋಭಾವ ಇಂದು ಜಿಲ್ಲೆ ಶೈಕ್ಷಣಿಕವಾಗಿ ಇಷ್ಟೊಂದು ಮುಂದುವರಿಯಲು ಸಾಧ್ಯವಾಯಿತು.

1836ರಲ್ಲಿ ಸ್ಥಾಪನೆಯಾದ ಪ್ರಥಮ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ವರ್ಗದವರಿಗೂ ಮುಕ್ತ ಅವಕಾಶವಿತ್ತು. ಆದರೆ ಕೆಳವರ್ಗದವರು ಈ ಶಾಲೆಗಳಿಗೆ ಸೇರಲು ಮುಂದೆ ಬರುತ್ತಿರಲಿಲ್ಲ. ಮೊದಲ ಶಾಲೆಗೆ ತಿಮ್ಮಪ್ಪನೆಂಬ ಉಪಾಧ್ಯಾಯನನ್ನೇ ನೇಮಿಸಿ ಸಮಾನತೆ ತೋರಿಸಿದರು. ಆದರೂ ಒಟ್ಟಾಗಿ ಕಲಿಯಲು ಮುಂದೆ ಬರುವುದು ಕುಂಠಿತವಾದ್ದರಿಂದ 1855ರಲ್ಲಿ ಬ್ರಾಹ್ಮಿನ್ ಗರ್ಲ್ಸ್ ಶಾಲೆ, ಉಡುಪಿಯಲ್ಲಿ 1873ರಲ್ಲಿ ಬ್ರಾಹ್ಮಿನ್ ಗರ್ಲ್ಸ್ ಶಾಲೆ, 1856ರಲ್ಲಿ ಮುಲ್ಕಿಯಲ್ಲಿ ಬೋರ್ಡಿಂಗ್ ಶಾಲೆ, (ಬೇಸಾಯ, ಅಡಿಗೆ, ಕಸೂತಿ, ಹುರಿಹಗ್ಗ, ಹೈನುಗಾರಿಕೆ, ನೇಯಿಗೆ, ಗುಡಿಕೈಗಾರಿಕೆ) ಕಾರ್ಕಳದಲ್ಲಿ 1990ರಲ್ಲಿ ಹುಡುಗಿಯರ ಶಾಲೆ, ಕಾರ್ಕಳ ಪಂಚಮರ ಶಾಲೆ, ಮೂಡಬಿದ್ರೆ ಪಂಚಮರ ಶಾಲೆ, ಉಜಿರೆ ಬೈರರ ಶಾಲೆ, ಪಂಚಮರ ಶಾಲೆ ಪುತ್ತೂರು ಮುಂತಾದ ಶಾಲೆಗಳನ್ನು ತೆರೆಯಬೇಕಾಯಿತು.

ಮಿಶನರಿಗಳು ಸ್ಥಾಪಿಸಿದ ನೇಯಿಗೆ, ಹಂಚು, ಕಾರ್ಖಾನೆಗಳಲ್ಲಿ ಜಾತಿ ಮತ ಬೇಧವಿಲ್ಲದೆ ಕೆಲಸ ನೀಡುತ್ತಿದ್ದರು. ಬಿಲ್ಲವರಲ್ಲದೆ ಇತರ ಜಾತಿಯವರೂ ಮತಾಂತರಗೊಂಡಿದ್ದಾರೆ. ಬಾಸೆಲ್ ಮಿಶನ್ ಹಿನ್ನೆಲೆಯುಳ್ಳ ಪ್ರೊಟೆಸ್ಟಂಟರಲ್ಲಿ ಜಾತಿ ಮತ ಬೇಧವಿಲ್ಲ. ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವ ಅವಕಾಶವಿತ್ತು. ಅಸ್ಪೃಶ್ಯತೆಗೆ ಅವಕಾಶವಿರಲಿಲ್ಲ.

ಬ್ರಿಟಿಷರು ಭಾರತದಲ್ಲಿ ತಾವು ಆಳಬೇಕಾದ ಪ್ರದೇಶಗಳು ಅಥವಾ ಪ್ರಾಂತ್ಯಗಳು ಅಲ್ಲಿಯ ಜನರು ಅವರ ಸಂಸ್ಕೃತಿ, ಧರ್ಮ, ಇತಿಹಾಸ, ಮುಂತಾದ ಆಂಶಗಳ ಕುರಿತು ಮಾಹಿತಿಗಳನ್ನು ಕಲೆಹಾಕಿದರು. ಇದರ ಮುಖ್ಯ ಉದ್ದೇಶವಿಷ್ಟೇ ತಮ್ಮ ಅಧೀನ ಪ್ರಜೆಗಳ ಕುರಿತು ಹೆಚ್ಚು ತಿಳಿದುಕೊಂಡಷ್ಟೂ ಅವರನ್ನು ಹೆಚ್ಚು ಪರಿಣಾಮಕಾರಿಯಾಗಿ ಆಳಲು ಸಾಧ್ಯವಾಗುತ್ತದೆ ಎಂಬ ನಂಬಿಕೆ. ಬರ್ನೆಲನ ಲಿಪಿಶಾಸ್ತ್ರ ಮತ್ತು ಡೆವಿಲ್ ವರ್ಶಿಪ್ ಆಫ್ ತುಳುವಾಸ್, ಕಾಲ್ಡ್ ವೆಲ್ ಡ್ರವಿಡಿಯನ್ ಲ್ಯಾಂಗ್ರೇಜ್, ಥಸ್ಟನ್‌ನ ಕಾಸ್ಟ್ ಎಂಡ್ ಟ್ರೈಬ್ ಆಫ್ ಸದರ್ನ್ ಇಂಡಿಯಾ ಮೊಗ್ಲಿಂಗನ ಮೆಮೊಯರ್ ಆಫ್ ಕೂರ್ಗ್, ರಿಕ್ಟರ್‌ನ ಕೊಡಗು ಪ್ರಾಂತ್ಯದಲ್ಲಿ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
141

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು