ಆಶೆ, ಶ್ರೀರಾಮನೂ ಶಬರಿಯೂ, ಚಿಕ್ಕ ನಾದಿನಿ, ಸ್ವಾಮಿ ಭಕ್ತಳಾದ ಪನ್ನಾದಾಸಿ,
ಅಹಲ್ಯಾಬಾಯಿ, ಶಾರದೆಯ ಉಡಿಗೆ, ಉರುವಲು, ಹಾಲು ಕರೆಯುವುದು,
ಮೊಸರು ಕಡೆಯುವುದು, ಚಿಕ್ಕ ಹೆಣ್ಣು ಮಕ್ಕಳಿಗೆ ಉಪದೇಶವು, ಧೈರ್ಯವುಳ್ಳ
ಹೆಂಗಸು, ಅಡುಗೆಯ ಪ್ರಕಾರಗಳು, ತೊಡುವ ಬಟ್ಟೆಗಳು, ಬಾಲಿಕೆಯರೇ ಹೊಸ
ರುಪಾಯಿಗಳನ್ನು ನೀವು ನೋಡಿರುವಿರಷ್ಟೇ. ಅವುಗಳ ಮೇಲಿರುವ ಮೋರೆಯು
ಯಾರದು? ಅದು 5ನೇ ಜಾರ್ಜ್ ಚಕ್ರವರ್ತಿಗಳವರದು.
ಬಾಸೆಲ್ ಮಿಶನ್ ಸಂಸ್ಥೆಯು ಪ್ರಾರಂಭಿಸಿದ ಶಿಕ್ಷಣ, ಔದ್ಯೋಗಿಕ ಕ್ಷೇತ್ರಗಳಲ್ಲಿ
ಮಹಿಳೆಯರೂ ತಮ್ಮನ್ನು ತೊಡಗಿಸಿಕೊಳ್ಳುಲು ಪ್ರಾರಂಭವಾದ ಮೇಲೆ ಯಂಗ್
ಮೆನ್ಸ್ ಕ್ರಿಶ್ಚನ್ ಎಸೋಸಿಯೇಶನ್, ಸ್ಪೂಡೆಂಸ್ಟ್ ಕ್ರಿಶ್ಚನ್ ಮೂವ್‌ಮೆಂಟ್, ಮದರ್ಸ್
ಯೂನಿಯನ್, ಸ್ವಿಚ್ ಕ್ರಾಫ್ಟ್, ಸೆಕ್ರೆಟರಿಯಲ್ ಪ್ರಾಕ್ಟಿಸ್, ಕಿಂಡರ್‌ಗಾರ್ಟನ್,
ಬಲಕೋ ಸಂಸ್ಥೆ ಇಂತಹುಗಳ ಚಟುವಟಿಕೆಗಳು ಜಿಲ್ಲೆಯಲ್ಲಿ ಪ್ರಾರಂಭಗೊಂಡು
ಮಹಿಳೆಯರ ಚಟುವಟಿಕೆಗಳಿಗೆ ಉತ್ತೇಜನ ಕೊಡುವಂತಾಯಿತು. ಶಿಕ್ಷಣವೆಂದರೆ
ಹಿಂದೆ ಜಾರುತಿದ್ದ ಮಹಿಳೆಯರು ಬಾಸೆಲ್ ಮಿಶನ್ ಕ್ರಾಂತಿಯಿಂದ ವಿದ್ಯಾರ್ಜನೆ
ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ಮಿಶನರಿ ವರದಿಗಳಲ್ಲಿ
ಕಂಡು ಬರುತ್ತದೆ.
1900ರಲ್ಲಿ ಜಿಲ್ಲೆಯಲ್ಲಿ ಬಾಸೆಲ್ ಮಿಶನ್ ನಡೆಸುತ್ತಿದ್ದ ಶಾಲೆಗಳಲ್ಲಿ 46
ಶಿಕ್ಷಕರು 14 ಶಿಕ್ಷಕಿಯರು ಕರ್ನಾಟಕ ಸದರ್ನ್ ಡಯಾಸಿಸ್ ನಡೆಸುತ್ತಿರುವ 28
ಪ್ರಾಥಮಿಕ, 6 ಹೈಸ್ಕೂಲ್ ಕನ್ನಡ ಮಾಧ್ಯಮ, ಇಂಗ್ಲಿಷ್ ಮಾದ್ಯಮ ಪ್ರಾಥಮಿಕ 6,
ಹೈಸ್ಕೂಲ್, ಪದವಿಪೂರ್ವಕಾಲೇಜು 3, ಪದವಿ ಕಾಲೇಜ್ 1 ವಿಭಿನ್ನ ಸಾಮರ್ಥ್ಯ
1 ಶಾಲೆಗಳಲ್ಲಿ ಇರುವ ಶಿಕ್ಷಕರು 366 ಇದರಲ್ಲಿ ಪುರುಷರು 35 ಮಾತ್ರ ಉಳಿದವರು
ಶಿಕ್ಷಕಿಯರು. ಇದಲ್ಲದೆ ಉಡುಪಿ, ಪುತ್ತೂರಿನಲ್ಲಿ ಬಾಲಕರ ಬೋರ್ಡಿಂಗ್ ಶಾಲೆ,
ಮುಲ್ಕಿ ಮಡಿಕೇರಿಯಲ್ಲಿ ಹೆಣ್ಮಕ್ಕಳ ಬೋರ್ಡಿಂಗ್ ಶಾಲೆಗಳು ನಡೆಯುತ್ತಿದೆ.
ಮಂಗಳೂರಿನಲ್ಲಿರುವ 13 ಕೈಸ್ತ ಧಾರ್ಮಿಕ ಭಾನುವಾರ ಶಾಲೆಯಲ್ಲಿರುವ ಒಟ್ಟು
ಶಿಕ್ಷಕರು 65 ಇದರಲ್ಲಿ ಪುರುಷರು ಕೇವಲ 5. ಸಂಗೀತ ಉಪಕರಣ ನುಡಿಸುವವರು
ವಾಯೊಲಿನ್ 50-50 ಆದರೆ ಸಂಗೀತ ನಾಯಕತ್ವ ವಹಿಸುವವರಲ್ಲಿ ಹೆಚ್ಚಿನವರು
ಪುರುಷರು. ಜಿಲ್ಲೆಯಲ್ಲಿ ಸಂಗೀತ ಉಪಕರಣ ಕಲಿಸುವವರು 4 ಮಹಿಳೆಯರು
ಮತ್ತೆಲ್ಲ ಪುರುಷರು. ಬಾಸೆಲ್ ಮಿಶನ್ ಸಂಸ್ಥೆಯು ಮಹಿಳೆಯರ ಮಧ್ಯೆ ಮಾಡಿದ
ಈ ಕ್ರಾಂತಿಯಿಂದಾಗಿ ಮಹಿಳೆಯರು ಹೆಚ್ಚೆಚ್ಚಾಗಿ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ
ತಮ್ಮನ್ನು ತೊಡಗಿಸಿಕೊಂಡರು.
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
145