Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/160

This page has been proofread.

ಮನೆಯಲ್ಲಿದ್ದುಕೊಂಡು ಬಾಸೆಲ್ ಮಿಶನ್‌ನ ಮುಖ್ಯ ರಾಜ್ಯವನ್ನು ಸ್ಥಾಪಿಸಿ ತದನಂತರ ಅಲ್ಲಿನ ಪರಿಸರದಲ್ಲಿ ಹಲವಾರು ನಿವೇಶನಗಳನ್ನು ಖರೀದಿಸಿ ಅಲ್ಲಿ ಸಭೆ, ಶಾಲೆ, ಬುಕ್ ಶಾಪ್, ಪ್ರೆಸ್, ವಸತಿಯನ್ನು ನಿರ್ಮಿಸಿದ್ದು ಮಾತ್ರವಲ್ಲದೆ ಹೆಚ್ಚಿನ ಸ್ಥಳವನ್ನು ವಾಣಿಜ್ಯ ಗೃಹ ಉಪಯೋಗಕ್ಕಾಗಿ ಬಾಡಿಗೆಗೆ ಗೇಣಿಗೆ ನೀಡಿದ್ದರು. ಈ ಪರಿಸರದಲ್ಲಿ ಬಾಸೆಲ್ ಮಿಶನ್ ಮರ್ಕಂಟೈಲ್ ಆಫೀಸಿನ ದೊಡ್ಡ ಕಟ್ಟಡವೊಂದರ ಪಳಿಯುಳಿಕೆಗಳು ಇತ್ತೀಚಿನವರೆಗೂ ಕಾಣುತ್ತಿತ್ತು. ಪ್ರಸ್ತುತ ಆ ಪ್ರದೇಶಕ್ಕೆ ಮಿಶನ್ ಸ್ಟ್ರೀಟ್' ಎಂಬ ಹೆಸರಿದ್ದು ಆ ಪರಿಸರದಲ್ಲಿ ಕೆಲವು ಬಾಡಿಗೆದಾರರು, ಗೇಣಿದಾರರು ಮಾತ್ರ ಇದ್ದಾರೆ.

ಬಲ್ಮಠವು ಮಂಗಳೂರು ಪೇಟೆಗೆ ಸುಮಾರು 1 ಮೈಲು ದೂರದಲ್ಲಿರುವ ಗುಡ್ಡ ಪ್ರದೇಶ. ದೂರದಿಂದ ಘಂಟೆಯಾಕಾರದಂತೆ ಹೋಲುವ ಈ ಗುಡ್ಡಕ್ಕೆ ಬೆಲ್ ಮೌಂಟ್ ಎಂದಿತ್ತು. ಮುಂದೆ ಅದು ಬಲ್ಮಟ ಆಯಿತೆಂದು ಹೇಳುತ್ತಾರೆ. ಮತ್ತೊಂದು ಹೇಳಿಕೆಯಂತೆ ಬೋಳಾಗಿರುವ ಕಟ್ಟಡಗಳ ಪ್ರದೇಶಕ್ಕೆ ಬೋಳು ಮಠ, ಮತ್ತೆ ಅದು ಬಲ್ಮಠ ಆಯಿತೆನ್ನುತ್ತಾರೆ. ಈ ಗುಡ್ಡದ ಮೇಲೆ ಮುಂಚೆ ಸರಕಾರದ ಕೆಲವು ಕಟ್ಟೋಣಗಳಿದ್ದವು. 1837 ಇಸವಿಯಲ್ಲಿ ನಡೆದ ಕಲ್ಯಾಣಪ್ಪನ ಕಾಟಕಾಯಿ ಸಂದರ್ಭದಲ್ಲಿ ಇಲ್ಲಿದ್ದ ಸರಕಾರಿ ಕಟ್ಟಡಗಳಿಗೆಲ್ಲವೂ ಬೆಂಕಿಗೆ ಆಹುತಿಯಾಗಿತ್ತು. 1840ನೆ ಇಸವಿ ಸೆಪ್ಟೆಂಬರ ತಿಂಗಳಲ್ಲಿ ಆ ಹಾಳುಬಿದ್ದ ಕಟ್ಟಡಗಳ ಉಳುಹುಗಳನ್ನೂ ವಿಸ್ತಾರವಾದ ತೋಟವನ್ನೂ ಬಹಿರಂಗವಾಗಿ ಏಲಂ ಮಾಡಬೇಕೆಂದು ಸರಕಾರದವರು ಆಜ್ಞೆ ಮಾಡಿದರು. ಆಗ ಕನ್ನಡ ಜಿಲ್ಲೆಯ ಮುಖ್ಯ ಕಲೆಕ್ಟರರಾಗಿದ್ದ ಶ್ರೀಯುತ ಎಚ್. ಎಮ್. ಬೇರ್‌ರವರು ಈ ಸ್ಥಳವನ್ನು ಕ್ರಯಕ್ಕೆ ಪಡಕೊಂಡು ಮಿಶನಿಗೆ ಉಚಿತವಾಗಿ ಕೊಟ್ಟರು. ಸ್ಥಳವನ್ನು ದಾನವಾಗಿ ಕೊಟ್ಟದ್ದು ಮಾತ್ರವಲ್ಲದೆ ಇಲ್ಲಿ ಕಾಫಿ ಬೆಳೆಸುವ ಪ್ರಯುಕ್ತ ಸಾವಿರಾರು ಗಿಡಗಳನ್ನು ನೀಡಿದರು. ಮಿಶನ್ ಈ ಪದೇಶದಲ್ಲಿ ಕಾಮಿ ಕೋಟಿ ಮತ್ತು ತುಳುನಾಡಿನಲ್ಲಿ ಶೇಂದಿಯಿಂದ ಸಕ್ಕರೆ ತಯಾರಿಸುವ ಪ್ರಯತ್ನವನ್ನೂ ಮಾಡಿದ್ದರೂ ಅದು ಸಫಲವಾಗಲಿಲ್ಲ.

ನೀರೇಶ್ವಾಲ್ಯ ಪರಿಸರದಿಂದ 1840ರ ನಂತರ ಬಲ್ಕತದ ಈ ವಿಶಾಲ ಸ್ಥಳಕ್ಕೆ ಬಾಸೆಲ್ ಮಿಶನ್‌ ಸ್ಥಾಪಿಸಿದ ಹಲವಾರು ವಿಭಾಗಗಳು ಸ್ಥಳಾಂತರಗೊಂಡವು ಈಗಿನ ವೈ.ಎಂ.ಸಿ ಯೆ ದಿಂದ ಸ್ಥಳದಲ್ಲಿ ಬಾಸೆಲ್ ಮಿಶನ್ ಪ್ರೆಸ್ (1841), ಸೆಮಿನರಿ(1847), ಪಾಥಮಿಕ ಶಾಲೆ ಬೋರ್ಡಿಂಗ್ ಹೋಮ್, ವೈ.ಎಂ.ಸಿ.ಯ ಎದುರಿಗಿರುವ ಅಥನಾ ಆಸ್ಪತ್ರೆಯಿರುವ ಸ್ಥಳದಲ್ಲಿ ಬಾಸೆಲ್ ಮಿಶನ್ ಪ್ರೆಸ್ ನ ವಿಶಾಲ ಬೈಂಡಿಗ್ ವಿಭಾಗ, ಶಾಂತಿ ದೇವಾಲಯ (1862) ಪ್ರಸ್ತುತ ಕೆ.ಟಿ.ಸಿ ಇರುವ ಸ್ಥಳಕ್ಕೆ

148

ತುಳುನಾಡಿನಲ್ಲಿ ಬಾಸೆಲ್ ಮರನ್ ಮತ್ತಿತರ ಲೇಖನಗಳು...