Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/169

This page has been proofread.

ಪಾಲಾಯಿತು. ಪಸ್ತುತ ಆ ಸ್ಥಳದಲ್ಲಿ ಅವರ ಮನೆಯೂ ಸುಂದರ ಶಾಲೆಯೂ ಇದೆ. (ಶಾಲೆ ನಡೆಸಲು ನಮ್ಮ ತಂದೆಯವರಿಗೆ ಮಿಶನ್‌ ಸಂಸ್ಥೆಯು ಕೊಟ್ಟಿತು. ಅಲ್ಲದೆ ಅದರೊಂದಿಗಿದ್ದ ಈ ಸ್ಥಳವೂ ಡಿಕ್ಲರೇಶನ್ ಮೂಲಕ ನಮ್ಮ ಹೆಸರಿಗೆ ಆಗಿದೆ. ಇಲ್ಲಿ ದೊರೆಗಳು, ಶಿಕ್ಷಕರು ಇದ್ದ ದೊಡ್ಡ ಮನೆಯೊಂದಿತ್ತು ಮಣ್ಣಿನ ಗೋಡೆಯನ್ನು ಹೊಂದಿದ್ದ ಈ ಮನೆಗೆ ಬಂಗ್ಲೆ ಎಂಬ ಹೆಸರಿತ್ತು ಇದರಲ್ಲಿ ದೊರೆ ಕೋಣೆ ಒಂದಿತ್ತು. ದೊರೆಗಳು, ಉಪದೇಶಗಳು, ಶಿಕ್ಷಕರು ಸಂಕಲಕರಿಯಕ್ಕೆ ಬಂದಾಗ ವಾಸ ಮಾಡಿದ್ದ ಮನೆ ಇದು ಎಂದು ದಿ. ವೆಂಕಣ್ಣ ಶೆಟ್ಟಿಯವರ ಮಗ ಶ್ರೀ ಹೇಮನಾಥ ಶೆಟ್ಟಿಯವರು ನೆನಸಿಕೊಳ್ಳುತ್ತಾರೆ) ಇತ್ತೀಚೆಗೆ ನಾದುರಸ್ತಿಯಲ್ಲಿದ್ದ ಶಾಲೆಯ ಹಿಂಬದಿಯಲ್ಲಿದ್ದ ಬಂಗ್ಲೆಯನ್ನು ಕೆಡವಿ ತಾರಸೀ ಮನೆಯನ್ನು ಪಕ್ಕದಲ್ಲಿ ನಿರ್ಮಿಸಿಕೊಂಡಿದ್ದಾರೆ. ಇದರ ಪಕ್ಕದಲ್ಲಿಯೇ ಸ್ಮಶಾನ ಸ್ಥಳವೆಂದು ಕರೆಯಲ್ಪಡುವ ಸ್ಥಳವಿದೆ.

ಸಂಕಲಕರಿಯದಲ್ಲಿ ಈ ಹಿಂದೆ ಮಾಡಿದ್ದ ಬೇಸಾಯದ ಉತ್ಪತ್ತಿ ಕೈಬಿಟ್ಟು ಹೋದದರಿಂದ 1964ರಲ್ಲಿ ರೆವೆ. ಇ.ಪಿ. ಫೆರ್ನಾಂಡಿಸ್‌ರವರ ನಾಯಕತ್ವದಲ್ಲಿ ಮತ್ತೊಮ್ಮೆ ಉಳಿದ ಕಾಡನ್ನು ಅಂಶಿಕವಾಗಿ ಗದ್ದೆಯಾಗಿ ಪರಿವರ್ತಿಸುವ ಕಾರ್ಯ ಪ್ರಾರಂಭವಾಯಿತು. ಮೊದಲಿಗೆ ಸುಮಾರು 15 ಅಡಿ ಸುತ್ತಳತೆಯ ದೊಡ್ಡ ಬಾವಿಯೊಂದನ್ನು ನಿರ್ಮಿಸಿ ಉಸ್ತುವಾರಿ ನೋಡಿಕೊಳ್ಳುವವರಿಗಾಗಿ ಒಂದು ಮನೆಯನ್ನು ನಿರ್ಮಿಸಲಾಯಿತು. ಬೈಲೂರಿನಿಂದ ಒಂದು ಕುಟುಂಬ ಮುಡಾರಿನನಿಂದ ಒಂದು ಕುಟುಂಬವನ್ನು ಕರಕೊಂಡು ಬಂದು ಇಲ್ಲಿ ಇವರಿಗೆ ಉಳುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಯಿತು. ಸುಮಾರು |0 ಮುಡಿ ಬೀಜ ಬಿತ್ತುವ ಗದ್ದೆಯನ್ನು ಮಾಡಲಾಯಿತು. ಹಟ್ಟಿ ಗೊಬ್ಬರಕ್ಕಾಗಿ ಜಾನುವಾರು, ಉಳುವ ಕೋಣಗಳನ್ನು ಸಾಕಲು ಆರಂಭಿಸಿ ವ್ಯವಸಾಯ ಭರದಿಂದ ಸಾಗಿತು. ಕಾರ್ತಿ, ಸುಗ್ಗಿ. ಇಡೆ ಕೊಳಕೆ. ಕೊಳಕೆ ಹೀಗೆ ನಾಲ್ಕು ಬೆಳೆ ತೆಗೆಯಲಾಗುತ್ತಿತ್ತು, ಬತ್ತ, ಉದ್ದು, ಹುರುಳಗಳನ್ನು ಬೆಳೆಸುತ್ತಿದ್ದರೆ ಇಡೆ ಬೆಳೆಯಾಗಿ ಸೌತೆ, ಶುಂಠಿ, ಮೆಣಸು ಮುಂತಾದವುಗಳನ್ನು ಬೆಳೆಸಲಾಗುತ್ತಿತ್ತು. ಅಲ್ಲದೆ ಇಲ್ಲಿ ಕಬ್ಬು ಬೆಳೆದು ಗಾಣ ತರಿಸಿ ಇಲ್ಲಿಯೇ ಬೆಲ್ಲ ತಯಾರಿಸಲಾಗುತ್ತಿತ್ತು. ಇಲ್ಲಿನ ಉತ್ಪತ್ತಿ ಎಷ್ಟಿತ್ತೆಂದು ಅಲ್ಲಿ ಸುಮಾರು 30 ವರ್ಷದಿಂದ ಸೇವೆ ಸಲ್ಲಿಸಿದ್ದು ಅಲ್ಲಿಯೇ ವಾಸಿಸುತ್ತಿರುವ ಶ್ರೀಮತಿ ಗುಲಾಬಿ ಅಮ್ಮನ್ನ ರವರಲ್ಲಿ ಕೇಳಿದಾಗ "ಏತ್‌ಂದ್ ಪನಿ ಮೂಲು ಬುಳೆಯಿನ ಬುಳೆನ್ ಗಾಡಿ ಗಾಡಿ ಅನಾಥ ಶಾಲೆಗೆ ಕೊಲೊವೊಂದಿತರ್‌” ಎನ್ನುತ್ತಾರೆ.

ಪ್ರಸ್ತುತ ಇಲ್ಲಿನ ಸುಮಾರು 20 ಎಕ್ರೆ ಗದ್ದೆ ಕಳೆದೆರಡು ವರ್ಷಗಳಿ೦ದ ಜಾನುವಾರು ಸಾಕುವ ಹಟ್ಟಿಯಲ್ಲಿ ಜೈಪಣೆಯಲ್ಲಿ ಅರ್ಕಂಜಿ

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು

157