ಎಕ್ರೆ ಸ್ಥಳ ಡಯಾಸಿಸ್ ಆಡಳಿತದಲ್ಲಿದ್ದರೂ ಹಲವಾರು ನಿವೇಶನಗಳು ಗೇಣಿದಾರರ/
ಬಾಡಿಗೆದಾರರ ಹತ್ತರ ಇದೆ. ಸಾಂತೂರಿನಲ್ಲಿ ಮಿಶನರಿಗಳು ಕಾಡನ್ನು ಕಡಿದು
ಗದ್ದೆಯನ್ನಾಗಿ ಪರಿವರ್ತಿಸಿ ಕೃಷಿ ಮಾಡಿದ ನಿದರ್ಶನಗಳಿವೆ.
ಗುಡ್ಡೆ- ಚರ್ಚ್, ಶಾಲೆ, ಬೋಧಕರ ಮನೆಯ ನಿವೇಶನಗಳಲ್ಲದೆ 4
ಕುಟುಂಬಗಳು ಮಿಶನ್ ಆಸ್ತಿಯಲ್ಲಿ ವಸತಿ ಹೊಂದಿದ್ದಾರೆ.
ಉಡುಪಿಯಲ್ಲಿ ದೇವಾಲಯವಲ್ಲದೆ ಮಿಶನ್ ಬಂಗ್ಲೆ, ಕ್ರಿಶ್ಚನ್ ಹೈಸ್ಕೂಲು,
ಮತ್ತು ಪದವಿ ಪೂರ್ವ ಕಾಲೇಜು, ಯು.ಬಿ.ಎಂ. ಸಿ. ಶಾಲೆ, ಬೋರ್ಡಿಂಗ್
ಹೋಮ್, ವೈ.ಎಂ.ಸಿ.ಎ. ಆಶಾನಿಲಯ, ಮಿಶನ್ ಆಸ್ಪತ್ರೆಗಳಿರುವ ನೂರಾರು ಎಕ್ರೆ
ಸ್ಥಳವಲ್ಲದೆ, ಬೋರ್ಡಿಂಗ್ ಹೋಮ್‌ನ ಗದ್ದೆಗಳು, ಶಾಲೆ ಕಾಲೇಜಿನ ಬೃಹತ್
ಮೈದಾನಗಳಲ್ಲದೆ ಕ್ರೈಸ್ತರು ವಾಸಿಸುವ ನೂರಕ್ಕೂ ಹೆಚ್ಚು ಮನೆಗಳು,
ಪರಬಾರೆಯಾಗಿರುವ ನಿವೇಶನಗಳು, ಮಾರಾಟ ಮಾಡಿರುವ ನಿವೇಶನಗಳು ಮಿಶನ್
ಆಸ್ತಿಯಾಗಿವೆ. ಪರ್ಕಳ, ಪೆರ್ಡೂರಿನಲ್ಲಿ ಮಿಶನ್ ಶಾಲೆ ಇದ್ದು, ಮಿಶನ್ ಆಸ್ತಿ ಇದೆ.
ಚೌರಾದಲ್ಲಿಯೂ ಮಿಶನ್ ಆಸ್ತಿ ಇದೆ.
ಕುಂದಾಪುರ ಮತ್ತು ಬಸ್ರೂರಿನಲ್ಲಿ ದೇವಾಲಯ ಶಾಲೆಗಳಿದ್ದು ಹಲವಾರು
ಕ್ರೈಸ್ತರ ಮನೆಗಳು ಮಿಶನ್ ಆಸ್ತಿಯಲ್ಲಿದೆ ಬಸ್ರೂರು ಶಾಲೆಯನ್ನು ಖಾಸಗಿಯವರು
ನಡೆಸುತ್ತಿದ್ದಾರೆ.
ಕಲ್ಯಾಣಪುರ-ಮಂಗಳೂರು-ಕುಂದಾಪುರ ಹೈವೆಯಲ್ಲಿರುವ
ಸಂತೆಕಟ್ಟೆಯಿಂದ ಎಡಕ್ಕೆ 1 1/2 ಕಿ.ಮಿ. ದೂರದಲ್ಲಿ 1856 ಸುಮಾರಿಗೆ ಕ್ರೈಸ್ತ
ಸಭೆಯೊಂದು ಸ್ಥಾಪನೆಯಾಗಿತ್ತು. ಸಣ್ಣ ದೇವಾಲಯ ಹಾಗೂ ಶಾಲೆ ಕಾರ್ಯ
ವೆಸಗುತ್ತಿತ್ತು. 1925ರಲ್ಲಿ ದೇವಾಲಯ ನಿರ್ಮಿಸಲಾಗಿತ್ತು. 1962ರಲ್ಲಿ ಶಾಲೆ
ಮುಚ್ಚಲ್ಪಟ್ಟರೂ 1986ರತನಕ ಇಲ್ಲಿ ಆರಾಧನೆ ನಡೆಸಲಾಗುತ್ತಿತ್ತು. ಬ್ರಹ್ಮಾವರ, ಪೇತ್ರಿ
ಕಡೆಗಳಿಂದ ಕ್ರೈಸ್ತರು ಇಲ್ಲಿ ಆರಾಧನೆಗೆ ಸೇರಿ ಬರುತ್ತಿದ್ದರು. ಪ್ರಸ್ತುತ ಅಲ್ಲಿ 53 ಸೆಂಟ್ಸ್
ಗೋರಿಯ ಸ್ಥಳ ಹಾಗೂ 50 ಸೆಂಟ್ಸ್ ಮಿಶನ್ ಸ್ಥಳವಿದೆ. ಒಂದು ಕುಟುಂಬವು
ಅದರಲ್ಲಿ ವಾಸವಿದೆ.
ಅಂಬಾಡಿ- ಈ ಸಭೆ ಸ್ಥಾಪನೆಯಾದ ಮೂಲ ಸ್ಥಳ ಪರಬಾರೆಯಾಗಿದೆ.
ಪ್ರಸ್ತುತವಿರುವ ಸ್ಥಳದಲ್ಲಿ ಶಾಲೆ ಇತ್ತು. 2ಎಕ್ರೆ ಸ್ಥಳವಿತ್ತು. ಪ್ರಸ್ತುತ ಸಭೆಗೆ ಒಂದು ಎಕ್ರೆ
ಸ್ಥಳ ಮಾತ್ರ ಇದ್ದು ಉಳಿದವುಗಳಲ್ಲಿ ಬಾಡಿಗೆಗಿದ್ದ ಕ್ರೈಸ್ತರು ಸುಮಾರು 4
ಕುಟುಂಬಗಳು ವಾಸ ಮಾಡುತ್ತಿದ್ದಾರೆ.
ಮಲ್ಪೆಯಲ್ಲಿ ದೇವಾಲಯ, ಶಾಲೆ ನಿವೇಶನ ಬಿಟ್ಟರೆ ಬೇರೆ ಆಸ್ತಿ ಇಲ್ಲ. ಹಂಚಿನ ಕಾರ್ಖಾನೆ ಕೋಮನ್‌ವೆಲ್ತ್ ಪಾಲಾಗಿದ್ದು ಅದನ್ನು ಅವರು ಪರಬಾರೆ ಮಾಡಿದ್ದಾರೆ.
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
159