ದೇಶಗಳನ್ನು ತುಚ್ಚಕರಿಸುವನು. ಅದೇ ರೀತಿಯಲ್ಲಿ ಉತ್ತರ ಧ್ರುವದತ್ತಲಾಗೆ ಅತಿ
ವಿಶಾಲವಾದ ಹಿಮದ ಬೈಲಾಗಿರುವ ಗೀನ್ ಲ್ಯಾಂಡಿನಲ್ಲಿ ವಸ್ತಿಯಾಗಿದ್ದ ಎಸ್ಕಿಮೋ
ಮನುಷ್ಯನು ಕಡು ಚಳಿಯ ತೀಕ್ಶ್ಣತೆಯನ್ನು ತಾಳಕೂಡದೆ ಅದರ ಪೆಟ್ಟನ್ನು
ನಿವಾರಿಸಿಕೊಳ್ಳುವುದಕ್ಕಾಗಿ ಹಿಮದ ಕಲ್ಲಿನಿಂದಲೇ ಭೂಮಂಡಲಾಕರದ ಒಂದು
ಗುಮಟವನ್ನು ನಿರ್ಮಿಸಿ, ಭೂಮಿಯ ಅಡಿಯಲ್ಲಿಯೇ ಬಿಲದೋಪಾದಿ
ಮಾರ್ಗವನ್ನು ಉಂಟುಮಾಡಿ, ಹೆಗ್ಗಣದಂತ ಜೀವನವನ್ನು ಕಳೆಯುತ್ತಾ, ಮೀನು
ಮೃಗಗಳ ಬೇಟೆಯಾಡಿ ಅದನ್ನು ಭಕ್ಷಿಸುತ್ತಾ ಅದರ ಚರ್ಮದ ದುಸ್ತುಗಳನ್ನು
ಉಡುತ್ತಾ ಇರುವವನಾಗಿ ಇದ್ದರೂ, ಸುಧಾರಣೆ ಹೊಂದಿದ ಯುರೋಪದವರ
ಜೀವನಕ್ಕಿಂತ ತನ್ನ ಜೀವನವೇ ಸೌಖ್ಯ, ತನ್ನ ಹಿಮ ಪ್ರದೇಶವೇ ಸ್ವರ್ಗ, ಅದನ್ನು
ಬಿಡುವದು ಹುಚ್ಚುತನ ಅನ್ನುವನು. ಅದೇ ರೀತಿಯಲ್ಲಿ ಆಯಾ ಜನಾಂಗದವರು
ತಮ್ಮ ತಮ್ಮ ದೇಶವನ್ನು ಕುರಿತು ದೊಡ್ಡ ದೊಡ್ಡ ಭಾವನೆಯುಳ್ಳವರಾಗಿರುವರು.
ಹೀಗೆ ದೇಶಾಭಿಮಾನವಿಲ್ಲದ ಜನಾಂಗವು ಭೂಲೋಕದಲ್ಲಿ ಒಂದೂ ಇಲ್ಲ.
1965- ದೇವಾರಾಧನೆ ಪದ್ಧತಿ, ಕ್ರೈಸ್ತ ದೇವಾಲಯಗಳಲ್ಲಿ ದೇಶಕ್ಕಾಗಿ
ಮಾಡುವ ಪ್ರಾರ್ಥನೆ
ಅತ್ಯಂತ ಕೃಪೆಯುಳ್ಳ ದೇವರೇ, ಒಡೆಯರ ಒಡೆಯನೇ, ನಮ್ಮ ಮೇಲೆ
ದೊರೆತನ ನಡಿಸುವ ಅಧಿಕಾರಿಗಳನ್ನು ನಿನ್ನ ಪರಾಂಬರಿಕೆ ಕರುಣೆಗಳಿಗೆ
ಒಪ್ಪಿಸಿಕೊಡುತ್ತೇವೆ. ನಮ್ಮ ರಾಷ್ಟ್ರಪತಿಯನ್ನು ಕಾಪಾಡಿ ನಡಿಸು.
ಅಧಿಕಾರದಲ್ಲಿರುವವರೆಲ್ಲರಿಗೆ ಜ್ಞಾನವಿವೇಕಗಳನ್ನು ದಯಪಾಲಿಸಿ, ಅವರು
ಪಕ್ಷಪಾತವಿಲ್ಲದೆ ನೀತಿನ್ಯಾಯದಿಂದ ನಮ್ಮನ್ನು ಆಳುವಂತೆ ಅನುಗ್ರಹಿಸು. ನಮ್ಮ ಈ
ಭರತಖಂಡವನ್ನೂ ಇದರ ಎಲ್ಲಾ ನಿವಾಸಿಗಳನ್ನು ಆಶೀರ್ವದಿಸು. ಪರೋಪಕಾರ
ಪ್ರಾಮಾಣಿಕತೆಗಳೂ ನೀತಿ ಸಮಾಧಾನಗಳೂ ನಮ್ಮಲ್ಲಿ ನೆಲೆಗೊಳ್ಳುವಂತೆ
ದಯತೋರು ಎಂಬದಾಗಿ ಬಿನ್ನವಿಸುತ್ತೇವೆ.
1897, ದೇವಾರಾಧನೆದ ಕ್ರಮ ತುಳು ಭಾಷೆಯಲ್ಲಿ ಸರಕಾರಕ್ಕಾಗಿ ಪ್ರಾರ್ಥನೆ ಸರ್ವತ್ರಾಣದ ನಿತ್ಯ ದೇವರೇ. ಅರಸುಳೆನವು ಅಧಿಕಾರದಾಕುಳೆನವು ಹೃದಯ ನಿನ ಕೈಟ್ ಉಂಡು ಅಂದ್‌ದ್ ಲಾ, ಈ ಅವೆನ್ ನೀರ್‌ದ ತೋಡುಳೆ ಲೆಕ್ಕನೆ ತಿಂಗಾದ್ ನಡಪಾವ ಅಂದ್ ನಿನ ಪರಿಶುದ್ಧ ವಾಕ್ಕೊಡ್ಡು ಪಿದುಕೊಣುದ, ಅಂಚಾಯಿನೆಡ್ ನಿನ ಸೇವಕೆ ಆಯಿ ಎಂಕುಳೆ ಕೈಸರ ಹೃದಯೊನುಲಾ ಈ ದೇಶೂನು ಅಳು ಮಾತಾ ಅಧಿಕಾರದಾಕುಳೆ ಹೃದಯೊನುಲಾ ಈಯೇ ನಡಪುಡುದು ಆಳೊಡು ಅಂದ್‌ದ್ ತಗ್ಗದಿ ಮನಸ್‌ಡ್ ನಟ್ಟೋಣುವ, ಆಕುಳು
162
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...