ಸೇರ್ಪಡೆಯಾಗುತ್ತಾ ಬರುತ್ತಿದೆ. ಇತ್ತೀಚೆಗೆ ಕನ್ನಡ ತುಳು ಇಂಗ್ಲಿಷ್ ಭಾಷೆಯ
ದೇಶೀಯ ಸ್ವರಗಳ ಸಂಗೀತಗಳು ಬಳಕೆಯಾಗುತ್ತವೆ. ಒಮ್ಮೊಮ್ಮೆ ಧರ್ಮಗುರುಗಳು
ಲ್ಯಾಟಿನ್ ಭಾಷೆಯಲ್ಲಿ ಪ್ರಾರ್ಥನೆ ಮಾಡುವುದಿದೆ. ಪ್ರಾಯಸ್ಥರಿದ್ದಲ್ಲಿ ಲ್ಯಾಟಿನ್
ಹಾಡುಗಳನ್ನೂ ಹಾಡುತ್ತಾರೆ.
ಪ್ರೊಟೆಸ್ಟಂಟ್ ಕ್ರೈಸ್ತರಲ್ಲಿ ಮೊದಲು ಭಾಷಾಂತರವಾದದ್ದು ತುಳು ಸತ್ಯವೇದ.
ಇದೇ ಬಳಕೆಯಲ್ಲಿತ್ತು. ತುಳುವಿನಲ್ಲಿ ಬೈಬಲ್ ಪಠಣ ಬೋಧನೆ, ಸಂಗೀತ ಪ್ರಾರ್ಥನೆ
ಎಲ್ಲವೂ ತುಳುವಿನಲ್ಲಿತ್ತು. ಸಭಾ ಮೀಟಿಂಗ್‌ಗಳೂ ಸಹಾ ತುಳುವಿನನಲ್ಲಿ
ಬರೆಯಲಾಗುತ್ತಿತ್ತು. ಈಗ ತುಳು ಸ್ವಲ್ಪ ಹಿಂದೆ ಹೋಗಿ ಕನ್ನಡ ಬಳಕೆ ಹೆಚ್ಚಾಗಿದೆ
ಪ್ರಸ್ತತ ದ.ಕ. ಉಡುಪಿ, ಕೊಡಗು, ಮುಂಬಯಿ ಆರಾಧನೆಗಳಲ್ಲಿ 2 ತುಳು
ಸಂಗೀತವಾದರೂ ಹಾಡುತ್ತಾರೆ. ಒಮ್ಮೆಮ್ಮೆ ತುಳುವಿನಲ್ಲಿ ತುಳು ಪ್ರವಚನ ಕೊಡುವ
ರೂಢಿಯಿದೆ.
ಸತ್ಯವೇದ 1824ರಿಂದ ಕನ್ನಡಕ್ಕೆ ಭಾಷಾಂತರಗೊಂಡು ಪರಿಷ್ಕೃತಗೊಂಡು
ಈಗ ಬಳಕೆಯಲ್ಲಿದೆ. 1841ರಿಂದ ತುಳುವಿಗೆ ಬೈಬಲ್ ಭಾಷಾಂತರವಾಗತೊಡಗಿದೆ.
1847ರಲ್ಲಿ ಇಡೀ ಹೊಸ ಒಡಂಬಡಿಕೆ ತುಳುವಿಗೆ ಭಾಷಾಂತರವಾಗಿದ್ದು ಹಳೆ
ಒಡಂಬಡಿಕೆಯ 5 ಪುಸ್ತಕಗಳು ಮಾತ್ರ ಭಾಷಾಂತರವಾಗಿದೆ. ಪ್ರಸ್ತುತ ಪ್ರೊಟೆಸ್ಟಂಟ್
ಕ್ರೈಸ್ತರ ಆರಾಧನೆಗಳು ಕನ್ನಡದಲ್ಲಿಯೇ ನಡೆಯುತ್ತಿರುವುದರಿಂದ ಕನ್ನಡ ಬೈಬಲ್
ಬಳಕೆಯಲ್ಲಿದೆ. ಆದರೂ 1847ರಲ್ಲಿ ಪ್ರಕಟಗೊಂಡ ತುಳು ಹೊಸ ಒಡಂಬಡಿಕೆ
ಈಗಲೂ ಬಳಕೆಯಲ್ಲಿದೆ. ಕಳೆದೆರಡು ವರ್ಷಗಳಿಂದ ತುಳು ಭಾಷೆಯ ಬೈಬಲ್
ಹೊಸತಾಗಿ ಭಾಷಾಂತರವಾಗುತ್ತಿದೆ.
ಸಂಗೀತ ಪುಸ್ತಕವು ಕನ್ನಡ ಮತ್ತು ತುಳುವಿನಲ್ಲಿದ್ದು 1841ರಿಂದ ಪ್ರಕಟಗೊಳ್ಳಲು ಪ್ರಾರಂಭವಾಗಿ 1913 ತನಕ ಪರಿಷ್ಕೃತ ಕೃತಿಗಳು ಬಂದು ಕನ್ನಡದಲ್ಲಿ 410 ತುಳುವಿನಲ್ಲಿ 251 ಹಾಡುಗಳು ಇವೆ. (ಕನ್ನಡ ತುಳು ಭಾಷೆಯ ಹಾಡುಗಳು ಹಲವಾರು ಪರಿಷ್ಕರಣಗೊಂಡಿದೆ. ಇವುಗಳು ಎಲ್ಲವೂ ಜರ್ಮನ್ ದಾಟಿಯಲ್ಲಿದ್ದು ಹೆಚ್ಚಿನವು ಜರ್ಮನ್ ಭಾಷೆಯಿಂದ ವಿದೇಶಿಯರಿಂದ ಮತ್ತು ದೇಶೀಯರಿಂದ ತರ್ಜುಮೆಗೊಂಡವು. ಈಗ 1913 ಕೃತಿಯೇ ಬಳಕೆಯಲ್ಲಿದೆ. ತುಳುನಾಡಿನಲ್ಲಿ ಆರಾಧನೆಗಳಲ್ಲಿ ವಿದೇಶಿ ಸ್ವರಗಳ ಹಾಡನ್ನೇ ಹಾಡಲಾಗುತ್ತಿತ್ತು. ಆದರೆ ಈಗ ಕನ್ನಡ ತುಳು ಭಾಷೆಯ ದೇಶೀಯ ಹಾಡುಗಳು ಬಳಕೆಯಲ್ಲಿದ್ದು ಆರಾಧನೆಗಳಲ್ಲದ ಸಂಧರ್ಭಗಳಲ್ಲಿ ಹಾಡಲ್ಪಡುತ್ತದೆ. ತುಳುನಾಡಿನಾದ್ಯಂತ ತುಳುವಿನಲ್ಲಿ ಪ್ರಾರ್ಥನಾ ವಿಧಿವಿಧಾನಗಳ ಪುಸ್ತಕವಿದ್ದು ಇದನ್ನೇ ಬಳಸಲಾಗುತ್ತಿತ್ತು. ಜನನ, ಮದುವೆ, ಮರಣ
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
167