Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/182

This page has been proofread.

ಸ್ಥಳಕ್ಕೆ ಬಿಳಿ ಗವನ್ ಬಂದಿವೆ. ಮಂಗಳ ಸೂತ್ರ ಹಿಂದೆ ಬಳಸುತ್ತಿರಲಿಲ್ಲ ಇದರ ಬದಲಾಗಿ ಒಂದು ಬಂಗಾರದ ದಪ್ಪದ ಚೈನ್ ಹಾಕುವ ಕ್ರಮವಿತ್ತು. ಈಗ ಮಂಗಳ ಸೂತ್ರ ಬಳಸುತ್ತಾರೆ. ಆದರೆ ಮಂಗಳ ಸೂತ್ರ ಕಟ್ಟುವುದು ಮದುವೆ ಚಪ್ಪರದಲ್ಲಿ. ಪ್ರೊಟೆಸ್ಟಂಟ್ ಕ್ರೈಸ್ತರಲ್ಲಿ ಮಂಗಳಸೂತ್ರವನ್ನು ದೇವಾಲಯದಲ್ಲಿಯೇ ಕಟ್ಟುವ ಕ್ರಮವಿದೆ. ಮಹಿಳೆಯರಿಗೆ ಆರಾಧನೆಯಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ, ಅಂತಿಮ ಸಂಸ್ಕಾರಕ್ಕೆ ಮಹಿಳೆ ಹೋಗುವುದು ನಿಷಿದ್ದ ಮುಂತಾದ ಕ್ರಮಗಳು ಇತ್ತು. ಆದರೆ ಈ ಕ್ರಮಗಳೆಲ್ಲ ಹೋಗಿ ಮಹಿಳೆಯರೂ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

ದೇವಾಲಯಗಳಲ್ಲಿ ಬೈಬಲ್ ಪಠಣವಿದ್ದ ಹಾಗೇ ಇಂತಹ ಹಾಡುಗಳನ್ನೇ ಹಾಡಬೇಕು, ಮುದ್ರಿತ ಪ್ರಾರ್ಥನೆಗಳನ್ನೇ ಮಾಡಬೇಕು ಎನ್ನುವ ಕ್ರಮವಿತ್ತು. ಆದರೆ ಬೈಬಲ್ ಪಠಣ ಬಿಟ್ಟರೆ ಬೇರೆಲ್ಲಾ ಕ್ರಮಗಳು ಬದಲಾಗಿವೆ. ಹೊಸ ಹೊಸ ದೇಶಿಯ ಹಾಡುಗಳ ಬಳಕೆಯಾಗುತ್ತವೆ. ಬೆಳೆ ಹಬ್ಬದ ಮೆರವಣಿಗೆ, ಪರಮ ಪ್ರಸಾದ ಮೆರವಣಿಗೆ ಹೀಗೆ ಹೊಸ ಹೊಸ ಆರಾಧನೆಗಳನ್ನು ಆಯೋಜಿಸಲಾಗುತ್ತಿದೆ. ದೇಶಕ್ಕಾಗಿ, ದೇಶದ ನಾಯಕರುಗಳಿಗಾಗಿ, ಅತಿವೃಷ್ಟಿ, ಅನಾವೃಷ್ಟಿ, ಸಾಂಕ್ರಾಮಿಕ ರೋಗ. ಸಮಾಜಿಕ ಕೆಡುಕುಗಳು ಮುಂತಾದ ಪ್ರಾರ್ಥನೆಗಳು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ನಂಬಿಕೆ ಒಂದಾದರೂ ಓದುವ ಬೈಬಲ್ ಒಂದಾದರೂ ಆಚರಣೆಗಳನ್ನು ಮಾತ್ರ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಕ್ರೈಸ್ತರು ತುಳುನಾಡಿನಲ್ಲಿ ಸೌಹಾರ್ದ ಸಹಬಾಳ್ವೆಯಲ್ಲಿ ಜೀವನ ನಡೆಸುತ್ತಿದ್ದಾರೆ.


ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...