ಹುಟ್ಟಿದ್ದಾನೆ ಎನ್ನುವುದಕ್ಕೆ ಆಧಾರವಿಲ್ಲ. ಹೀಗಿರುವಲ್ಲಿ ಡಿಸೆಂಬರ್ 25 ತಾರೀಕು
ಯಾಕಾಗಬೇಕು ಎಂದು ಎಂದು ಅನೇಕ ಕಾರಣಗಳನ್ನು ಕೊಟ್ಟು ಈ
ಆಚರಣೆಯನ್ನು ಖಂಡಿಸುತ್ತಾರೆ.
ಧರ್ಮಗ್ರಂಥಗಳು ಒಂದು ಮತ ಹುಟ್ಟಿದ ಹಲವು ವರ್ಷಗಳ ನಂತರ
ರಚಿತವಾಗುತ್ತದೆ. ಬುದ್ಧ ಪೂರ್ಣಿಮಾ, ಕೃಷ್ಣ ಜಯಂತಿ, ರಾಮನವಮಿ ಮುಂತಾದ
ಹಬ್ಬಗಳು ಅವರ ಗೌರವಾರ್ಥ ಆಚರಿಸಲ್ಪಡುತ್ತದೆ. ಇದಕ್ಕೆ ಚಂದ್ರಮಾನ
ಪದ್ದತಿಯನ್ನು ಬಳಸುತ್ತಿರುವುದರಿಂದ ತಾರೀಕುಗಳಲ್ಲಿ ವ್ಯತ್ಯಾಸವಾಗುತ್ತದೆ.
ಆದ್ದರಿಂದ ಆಚರಣೆಗಳ ದಿನಗಳು ಪ್ರತಿವರ್ಷವೂ ಒಂದೇ ಇರುವುದಿಲ್ಲ. ಇಲ್ಲಿ
ತಾರೀಕು ಮುಖ್ಯವಲ್ಲ. ಮಹಾನ್ ವ್ಯಕ್ತಿಗಳು, ಲೋಕರಕ್ಷಕರು, ಶಾಂತಿದೂತರು
ಹುಟ್ಟಿದ್ದು ನಿಜ. ಭಕ್ತಿಯಿಂದ ಹಬ್ಬವನ್ನು ಮುಖ್ಯ. ಯೇಸು. ರಾಮ, ಕೃಷ್ಣ,
ಮಹಮದ್ ಪೈಗಂಬರ್ ಮುಂತಾದವರುಗಳು ತಮ್ಮ ಅನುಯಾಯಿಗಳಿಗೆ ತಮ್ಮ
ಜನ್ಮದಿನವನ್ನು ಹಬ್ಬವಾಗಿ ಆಚರಿಸಲು ಹೇಳಿದ್ದರೇ ? ಖಂಡಿತಾ ಇಲ್ಲ. ಜನರೇ
ಅವನ್ನು ಗುರುತಿಸಿ ಅವರ ಜನನ, ಜೀವನ, ಬೋಧನೆ, ಇವುಗಳ ಜ್ಞಾಪಕಾಥವಾಗಿ
ಹಬ್ಬಗಳನ್ನು ಆಚರಿಸುತ್ತಾರೆ.
ಶಾಂತಿ, ಸಹನೆ, ಗೆಳೆತನ, ದಯೆ, ಕ್ಷಮೆ ಇವುಗಳನ್ನು ಸಾರಿ ತಿಳಿಸುವುದೇ
ಧರ್ಮಗ್ರಂಥದ ತಿರುಳಾಗಿದೆಯೇ ವಿನಾ ಯಾವುದೇ ಧರ್ಮಗ್ರಂಥಗಳು ಹಬ್ಬವನ್ನು
ಆಚರಿಸಲು ತಿಳಿಸುವುದಿಲ್ಲವೋ ಹಾಗೆಯೇ ಇನ್ನೊಬ್ಬರನ್ನು ನಿಂದಿಸಲು,
ನೋಯಿಸಲು, ಹಂಗಿಸಲು ಹೇಳುವುದಿಲ್ಲ.
ಕ್ರಿಸ್ಮಸ್ ದಿನಗಳಲ್ಲಿ ನಮ್ಮ ಹೃದಯಗಳು ದೇವರು ನಮಗೆ ಮಾಡಿರುವ ಉಪಕಾರಗಳು ತುಂಬಿರುತ್ತವೆ. ಪ್ರತಿಯೊಂದು ಸಾರಿ ನಮ್ಮ ಕುಟುಂಬದಲ್ಲಿ ಮಗು ಹುಟ್ಟುವಾಗ ನಾವು ದೇವರ ನರಾವತಾರವನ್ನು ಅನುಭವಿಸುತ್ತೇವೆ. ಆದ್ದರಿಂದ ಕಿಸ್ಮಸ್‌ನ ಮಹತ್ವವೇನು, ಅದು ಅಂದು ಬೆತ್ಲೆಹೆಮ್ನಲ್ಲಿ ಕಂಡ ಅದ್ಭುತ ನಕ್ಷತ್ರವೋ ? ಕುರುಬರ ಮುಂದೆ ದೇವದೂತರು ಹಾಡಿದ ಗಾಯನವೋ ? ಪ್ರೀತಿ ತುಂಬಿದ ತಾಯಿಯೋ ಅಥವಾ ಗಲಿಬಿಲಿಗೊಂಡ ಅರಸುಗಳೋ ? ನಿಜವಾಗಿ ಅಲ್ಲ. ಕ್ರಿಸ್ಮಸ್ ಮಹತ್ವವೇನೆಂದರೆ ದೇವರು ನಮಗೆ ಅತ್ಯತ್ತಮವಾದುದನ್ನೇ ಕೊಟ್ಟಿದ್ದಾನೆ ಮತ್ತು ಇಂದೂ ನಮಗೆ ಅತ್ಯುತ್ತಮವಾದುದನ್ನೇ ಕೊಡಲು ಶಕ್ತನು. ಆ ದೇವರು ಆ ಉತ್ತಮ ಅಶೀರ್ವಾದಗಳನ್ನೇ ಸರ್ವ ಜನರಿಗೆ ದಯಪಾಲಿಸಲಿ.
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
173