ಸಂತ ನಿಕೊಲಸ್ ಸಾಂತಾ ಕ್ಲಾಸ್: ಸಾಂತಾಕ್ಲಾಸ್ ఎంబ ಹೆಸರು
ಸಂತ ನಿಕೋಲಸ್ ಎಂಬ ಹೆಸರಿನ ರೂಪಾಂತರ. ಯುರೋಪಿನ ಮೈರಾ ನಗರಕ್ಕೆ
ಸೇರಿದ ಪಟಾರ ರೇವು ಪಟ್ಟಣದಲ್ಲಿ ವಾಸಿಸುತ್ತಿದ್ದ ಒಂದು ಶ್ರೀಮಂತ ಕುಟುಂಬದಲ್ಲಿ
ಈತನು ನಾಲ್ಕನೇ ಶತಮಾನದಲ್ಲಿ ಜನಿಸಿದ. ಒಬ್ಬ ಪ್ರಖ್ಯಾತ ಸಂತನೆಂದು
ಕರೆಯಲ್ಪಟ್ಟ ಈತನ ಬಾಲ್ಯ ಹಾಗೂ ಜೀವನದ ಬಗ್ಗೆ ಈ ತನಕ ಚರಿತ್ರೆಗಳು
ಲಭ್ಯವಾಗಿರದಿದ್ದರೂ ಯೌವನಸ್ಥನಾಗಿದ್ದಾಗ ಈತನು ಪ್ಯಾಲೆಸ್ತೀನ್, ಈಜಿಪ್ಟ್
ಮುಂತಾದ ಕಡೆ ಪ್ರಯಾಣ ಮಾಡಿದ. ಈ ಪ್ರಯಾಣವು ಈತನು ಧರ್ಮ
ಬೋಧಕನಾಗಿದ್ದುಕೊಂಡು ಮಾಡಿದ್ದ ಪ್ರಯಾಣವಾಗಿರುತ್ತದೆ.
ಈತನು ಮೈರಾ ಪ್ರಾಂತ್ಯದ ಲಿಸಿಯಾ ಎಂಬಲ್ಲಿ ಬಿಷಪ್ (ಧರ್ಮಾಧ್ಯಕ್ಷನಾಗಿದ್ದನು ಎಂದು ಚರಿತ್ರೆ ಪುಟಗಳಲ್ಲಿ ಕಂಡು ಬರುತ್ತದೆ. ರೋಮಾಯ ಚಕ್ರವರ್ತಿಯ ಆಳ್ವಿಕೆಯ ಕಾಲದಲ್ಲಿ
ರಾಜನಾಗಿದ್ದ ಡಯಾಕ್ಸೆಟಿಯಾನ್ ಎಂಬುವನು ಈತನಿಗೆ ಜೈಲು ಶಿಕ್ಷೆ ವಿಧಿಸಿದ್ದನು.
ಕಾಲ್ಪನಿಕ ದೇವತೆಯನ್ನು ಬಿಟ್ಟು ಕ್ರಿಸ್ತನನ್ನು ಪೂಜಿಬೇಕೆಂದು ಜನರಿಗೆ ಬೋಧಿಸಿದ್ದೇ
ಈತನು ಮಾಡಿದ ಅಪರಾಧವಾಗಿತ್ತು. ಆದರೆ ಕಾನ್ಸ್ಟಂಟೈನ್ ಎಂಬವನು
ರಾಜನಾದಾಗ ಕ್ರೈಸ್ತ ಧರ್ಮವನ್ನು ರಾಷ್ಟ್ರೀಯ ಧರ್ಮವನ್ನಾಗಿ ಮಾಡಿ ಸಂತ
ನಿಕೊಲಸ್‌ನನ್ನು ಬಿಡುಗಡೆ ಮಾಡಿ ಬಿಷಪ್ ಹುದ್ದೆಯಲ್ಲಿ ಮುಂದುವರಿಸಿದನು.
ಈತನ ಬದುಕು ಮತ್ತು ಸೇವೆ ಬಡಬಗ್ಗರ ನಡುವೆ ಆಗಿತ್ತು. ಈತನಿಗೆ ಅಸಹಾಯಕ
ಮಕ್ಕಳನ್ನು, ದೀನ ದಲಿತರನ್ನು ಯಾವ ರೀತಿ ಸಂತೈಸುವುವದೇ ಚಿಂತೆ.
ಕಷ್ಟದಲ್ಲಿದ್ದವರನ್ನು ಪರಾಂಬರಿಸಿ ಅವರಿಗೆ ಸಹಾಯ ಮಾಡುವುದು ಅವನ ಮುಖ್ಯ
ಕೆಲಸವಾಗಿತ್ತು. ಇಂತಹ ಮಹತ್ಕಾರ್ಯಗಳಿಂದ ಆತ ಹೆಸರುವಾಸಿ
ಧರ್ಮಾಧ್ಯಕ್ಷನಾಗಿದ್ದನು. ಕ್ರಿ.ಶ. 342ನೇ ಇಸವಿ ಡಿಸೆಂಬರ್ 6ರಲ್ಲಿ ಕಾಲವಾದ ಈ
ಸಂತ ನಿಕೊಲಸ್ ತನ್ನ ಬದುಕಿನ ಬೆಳಕನ್ನು ಇಲ್ಲಿ ಬಿಟ್ಟು ಹೋಗಿದ್ದ. ಈತನ
ಮರಣಾನಂತರ ಡಿಸೆಂಬರ್ ಆರರಂದು ಪ್ರತಿ ವರ್ಷವೂ ಅತನ ಹೆಸರಿನಲ್ಲಿ ಮಕ್ಕಳಿಗೆ
ಉಡುಗೊರೆ ಕೊಡುವ ಸಂಪ್ರದಾಯ ಆರಂಭವಾಯಿತು. ಕ್ರಮೇಣ ಈ ಕ್ರಮವು
ಡಿಸೆಂಬರ್ 25ಕ್ಕೆ ಬಂದು ಕ್ರಿಸ್ಮಸ್ ಆಚರಣೆಯ ಸಂಸ್ಕೃತಿಯಲ್ಲಿ ಒಂದಾಗಿದೆ.
ಸಾಂತಾಕ್ಲಾಸ್ ನೆನಪು ಚರಿತ್ರೆಯಲ್ಲಿ : ಆತನ ಹೆಸರಿನಲ್ಲಿ ಸಾವಿರಾರು
ದಂತಕತೆಗಳು ಹುಟ್ಟಿಕೊಂಡಿದ್ದು ಅವುಗಳಲ್ಲಿ ನಿಜ ಯಾವುದು ? ದಂತಕತೆಗಳಾವುದು
ಎಂಬುದಾಗಿ ಪ್ರತ್ಯೇಕಿಸುವುದು ಕಷ್ಟ
ಟರ್ಕಿ ದೇಶದಲ್ಲಿ ಈ ಸಂತನ ನೆನಪಿಗೆ ಹಲವಾರು ಅಂಚೆ ಚೀಟಿಗಳನ್ನು ಹೊರ ತಂದಿದ್ದರು. ಮೈರಾದಲ್ಲಿ ಆತನ ಸಮಾಧಿ ಇಂದಿಗೂ ಸುರಕ್ಷಿತವಾಗಿದೆ. ಅವನ ಅವಶೇಷಗಳನ್ನು 11ನೇ ಶತಮಾನದಲ್ಲಿ ಇಟಲಿಯಲ್ಲಿ ಬಾರಿ ಎಂಬ ಸ್ಥಳಕ್ಕೆ ಒಯ್ದು
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...
175