ಅಲ್ಲಿ ಅವರನಿಗೆ ಸ್ಮಾರಕವೊಂದನ್ನು ನಿರ್ಮಿಸಿದ್ದಾರೆ. ಅಮೆರಿಕಾದಲ್ಲಿ ಸೈಂಟ್
ನಿಕೊಲಸ್ ಎಂಬ ಹೆಸರಿರುವ ಚಿಕ್ಕದೊಂದು ಊರಿದೆ. ಈ ಊರಿಂದ ಪ್ರತಿ
ವರ್ಷವೂ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಅಮೂಲ್ಯ ಉಡುಗೊರೆಗಳನ್ನು ಜಗತ್ತಿನ
ಎಲ್ಲಾ ಕಡೆಗಳಲ್ಲಿರುವ ಅಸಂಖ್ಯಾತ ಬಡ ಮಕ್ಕಳಿಗೆ ಕಳುಹಿಸುತ್ತಿದ್ದರು. ಆತನ
ಹುಟ್ಟೂರಿನಲ್ಲಿ ಆತನ ಗೌರವಾರ್ಥ ದೇವಾಲಯವೊಂದನ್ನು ನಿರ್ಮಿಸಿದ್ದು ಅದು
ಸುಪ್ರಸಿದ್ಧ ಯಾತ್ರಾ ಸ್ಥಳವೂ ಆಗಿತ್ತು. ಹಲವಾರು ದೇವಾಲಯಗಳನ್ನು ಆತನ
ಹೆಸರಿನಲ್ಲಿ ಕಟ್ಟಿಸಲಾಗಿತ್ತು. ಈತ ವ್ಯಾಪಾರಿಗಳ ಮತ್ತು ಸಮುದ್ರಯಾನ
ಕೈಗೊಳ್ಳುವವರ ಪೋಷಕನಾಗಿದ್ದಾನೆ ಎಂಬ ನಂಬಿಕೆಯೂ ಬೆಳೆದು ಬಂದಿದ್ದು
ಪ್ರಯಾಣಿಕರು ಕಳ್ಳರಿಂದ ತಮ್ಮನ್ನು ರಕ್ಷಿಸಬೇಕೆಂದು ಈತನಲ್ಲಿ ಪ್ರಾರ್ಥಿಸುತ್ತಿದ್ದರು.
ಕ್ರಿಸ್ಮಸ್ ಆಚರಣೆಯಲ್ಲಿ ಕ್ರಿಸ್ಮಸ್ ತಾತ: ಪ್ರಾರಂಭದಲ್ಲಿ ಡಿಸೆಂಬರ್ 6ರಂದು
ಇಂಗ್ಲೆಂಡಿನ ಶಾಲೆಗಳಲ್ಲಿ ಮತ್ತು ದೇವಾಲಯಗಳಲ್ಲಿ ಈತನ ಹಬ್ಬವನ್ನು ಬಹಳ
ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಜರ್ಮನಿಯಲ್ಲಿ ವ್ಯಕ್ತಿಯೊಬ್ಬ ಕೆಂಪು ಬಣ್ಣದ
ಬಿಷಪನ ವೇಷ ಧರಿಸಿ ಪುಟ್ಟ ಮಕ್ಕಳಿಗೆ ಉಡುಗೊರೆ ಹಾಗೂ ತಿಂಡಿ ತಿನಸುಗಳನ್ನು
ಹಂಚುತ್ತಿದ್ದ. ಇಂಗ್ಲೆಂಡಿನಲ್ಲಿ ಹುಡುಗನೊಬ್ಬ ಸಾಂತಾಕ್ಲಾಸ್ ವೇಷ ಧರಿಸಿಕೊಂಡು
ನಗರದ ಬೀದಿಗಳಲ್ಲಿ ಜನರನ್ನು ಆಕರ್ಷಿಸುತ್ತಾ ಮೆರವಣಿಗೆ ಹೋಗುವ ಪದ್ಧತಿ
ಇತ್ತು. ಕ್ರಿಸ್ಮಸ್ ದಿನದಂದು ಕಾರ್ಯಕ್ರಮಗಳನ್ನು ಅವನೇ ನೆರವೇರಿಸುತ್ತಿದ್ದ.
ಕ್ರಮೇಣ ಈ ಪದ್ಧತಿಗಳು ಬೇರೆ ಬೇರೆ ದೇಶಗಳಲ್ಲಿ ಹಬ್ಬಿ ಕ್ರಿಸ್ಮಸ್ ಆಚರಣೆಯಲ್ಲಿ
ಸಂಸ್ಕೃತಿಯ ಪ್ರತೀಕವಾಗಿ ಈ ಕ್ರಿಸ್ಮಸ್ ತಾತ ಬರತೊಡಗಿದ.
ಇಂಗ್ಲೆಂಡಿನ ರಾಜನಾದ 8ನೇ ಹೆನ್ರಿ 1542ರಲ್ಲಿ ಇದಕ್ಕೆ ತಡೆ ವಿಧಿಸಿದರೂ 1552ರಲ್ಲಿ ಅಧಿಕಾರಕ್ಕೆ ಬಂದ ರಾಣಿ ಮೇರಿ ಈ ಪದ್ಧತಿಯನ್ನು ಮತ್ತೆ ಜಾರಿಗೊಳಿಸಿದಳು. ಕೊನೆಗೆ ರಾಣಿ ಎಲಿಜಬೇತಳಿಂದ ಈ ಪದ್ಧತಿಯು ಶಾಶ್ವತವಾಗಿ ರದ್ದುಗೊಂಡಿದ್ದರೂ ಈಗಲೂ ಈ ಪದ್ಧತಿ ಜಗತ್ತಿನಾದ್ಯಂತ ಇದೆ. ಜರ್ಮನಿಯಲ್ಲಿ ಆಗಿಂದಲೇ ಈ ಪದ್ಧತಿ ಉಳಿದುಕೊಂಡಿತ್ತು. ಮತ್ತೊಂದು ಐತಿಹ್ಯದ ಪ್ರಕಾರ ಡಚ್ ನಿವಾಸಿಗಳು ಅಮೇರಿಕದಲ್ಲಿ ಕಾಲಿಡುವಾಗ ಸಾಂತಾಕ್ಲಾಸ್‌ನನ್ನು ನೆನಪಿಸುವ ಪದ್ಧತಿಯನ್ನು ಅಲ್ಲಿಗೆ ತಂದರಂತೆ. ಅಮೇರಿಕಾದ ಸಾಂತಾಕ್ಲಾಸ್ ದಪ್ಪ ದೇಹದ, ನೆರೆಕೂದಲಿನೊಂದಿಗೆ, ಬಿಳಿಯ ಗಡ್ಡವನ್ನು ಇಟ್ಟುಕೊಂಡು ಉಣ್ಣೆಯ ಬಟ್ಟೆಯನ್ನು ಧರಿಸಿದವನಾಗಿ ಕುದುರೆಯ ಮೇಲೆ ಸವಾರಿ ಮಾಡುತ್ತಾ ಉಡುಗೊರೆಯನ್ನು ಕೊಡಲು ಬರುತ್ತಾನೆ. ಕ್ರಿಸ್ಮಸ್ ಸಂಜೆಯಂದು ಡಚ್ಚರು ಸಾಂತಾಕ್ಲಾಸ್‌ನ ಉಡುಗೊರೆಗಾಗಿ ತಮ್ಮ ತಮ್ಮ ಮನೆಯ ಮುಂದೆ ಪೆಟ್ಟಿಗೆಗಳನ್ನು ತೂಗಿ ಬಿಡುತ್ತಾರೆ.
176
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...