Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/195

This page has been proofread.

ಪ್ರೇಮಧರ್ಭಕರೋದಲಹುದು ವಿಶ್ರಾಂತಿ
ಅತ್ತಲಾ ಶೀಮೆಯೊಳಗಾ ರಾತ್ರಿಯೊಳಗೆ
ಮೊತ್ತ ಕುರಿಮಂದೆಯನು ಕಾವ ಕುರುಬರಿಗೆ
ಪ್ರತ್ಯಕ್ಷನಭದಿ ದೇವರ ದೂತ ನಿಲಲೂ;
ಸುತ್ತಲೂ ಪ್ರಕಾಶಿಸಿತು ದೇವ ಮಹಿಮೆಗಳು.


ದೂತ ನುಡಿದನು. ಇಗೋ ನಿರ್ಭಯವು ನಿಮಗೆ
ಪ್ರೀತಿಯ ಪ್ರಸಂಗ ಹೇಳುವೆ ಸರ್ವಜನಕೆ
ನಾಥನೀ ದಿನ ಕ್ರಿಸ್ತನೆಂಬ ರಕ್ಷಕನೂ
ಖ್ಯಾತದಾವಿದ ಪಟ್ಟಣದಿ ಪುಟ್ಟಿಹನೂ.


ನಿಮಗಿದೋ ಗುರುತು ಶಿಶು ಗೋದಲಿಯ ಮದ್ಯಾ
ವಿಮಲ ವಸ್ತ್ರದಿ ಸುತ್ತಿ ಮಲಗಿಹುದು ಸದ್ಯಾ
ಅಮಿತ ಪರಲೋಕ ಸೈನ್ಯವು ತತೂಕ್ಷಣಕೆ
ನಮಿಸಿದುದು ದೂತನೊಡನಧಿಕ ಕರ್ತನಿಗೆ.


ಕರ್ತಗೆ ಮಹೋನ್ನದಿ ಮಹಿಮೆ, ಧಾತ್ರಿಯಲಿ
ವರ್ತಿಪ ಸಮಾಧಾನ, ದಯವು ಮರ್ತ್ಯರಲ್ಲಿ
ಮತ್ತವರು ಹಾಡಿ ತೆರಳಲು ಕುರುಬರಾಗಾ
ಬೆತ್ಲೆಹೇಮಿಗೆ ಬಂದು ಕಂಡರಿತಿ ಬೇಗಾ.


ಮೂಡಣದ ಪಂಡಿತರು ಬಾಲಯೇಸುವ ಕಾಣಲು ಬಂದದ್ದು.
(ಭಾಮಿನಿ ಷಟ್ನದಿ, ಫ. ಕಿಟೆಲ್, ಕಥಾಮಾಲೆ. 1862)


ಯೇಸು ಕನ್ನಿಕೆಯಿಂದ ಹುಟ್ಟಿರೆ
ಲೇಸುವಾಹಿತು ಲೋಕಕಾದರು
ಕೂಸ ಮನ್ನಿಸುವದಕೆ ಬಾರರೆರೂಸಲೇಮವರೂ
ಆಸರೆನ್ನದೆ ಪಯಣ ಮಾಡುತೆ-
ರೂಸಲೇಮಿಗೆ ಕೂಸ ನೋಡಲಿ-

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...

183