ಸಾಕಷ್ಟು ಅವಕಾಶವಿದೆ, ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಪಠ್ಯ
ಪುಸ್ತಕಗಳ ಮೂಲಕ, ಆಟಪಾಠಗಳ ಮೂಲಕ, ವಿಚಾರ ಗೋಷ್ಠಿಗಳ ಮೂಲಕ
ಅರಿಯಲು ಅನುಕೂಲವಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಅತ್ಯಗತ್ಯವಾಗಿ
ಬೇಕಾದುದು ಓದಿನ ನೈಪುಣ್ಯ, ಹೀಗಾಗಿ ಶಾಲೆಗಳಲ್ಲಿ ಕಲಿಯುವ ಚರಿತ್ರೆ, ಭೂಗೋಳ,
ಸಾಹಿತ್ಯ, ವಿಜ್ಞಾನ, ಗಣಿತ, ಮುಂತಾದ ವಿಷಯಗಳಲ್ಲಿ ಉತ್ತಮ ಪ್ರಗತಿಯನ್ನು
ಸಾಧಿಸಬೇಕಾದರೆ ಒಳ್ಳೆಯ ಓದುಗಾರಿಕೆಯನ್ನು ಸಾಧಿಸಬೇಕು.
ಪುಸ್ತಕ ಸಂಗ್ರಹ ಯಾಕೆ, ಭಾರತೀಯರ ಮನೆಗಳಲ್ಲಿ ಒಂದು ಕಾಲಕ್ಕೆ ಅಜ್ಜ
ಅಜ್ಜಿಯರ ಪಾತ್ರ ಹಿರಿದಾಗಿತ್ತು ಅವರು ಸಂಜೆಯ ಹೊತ್ತು ಮೊಮ್ಮಕ್ಕಳನ್ನು ಒಂದು
ಕಡೆ ಕಲೆಹಾಕಿ ಅವುಗಳಿಗೆ ಬಾಯಿ ಪಾಠ ಹೇಳಿಕೊಡುವುದು ರೂಢಿಯಲ್ಲಿತ್ತು. ಅಕ್ಷರ,
ಮಗ್ಗಿ, ತಿಥಿ, ವಾರ, ನಕ್ಷತ್ರ, ಮುಂತಾದವುಗಳನ್ನು ಬಾಯಿ ಪಾಠ ಮಾಡಿಸುತ್ತಿದ್ದರು.
ಮಕ್ಕಳಿಗೆ ಒಳ್ಳೆಯ ಶ್ಲೋಕಗಳನ್ನು ಕಲಿಸುತ್ತಿದ್ದರು. ಮಕ್ಕಳು ನಿಶಬ್ಬರಾಗಿ ಕುಳಿತು ಅಜ್ಜ
ಅಜ್ಜಿ ಹೇಳುತ್ತಿದ್ದ ಕತೆಗಳನ್ನು ಕೇಳುತ್ತಿದ್ದರು. ಕೆಲವು ಮಕ್ಕಳು ಕತೆಗಳನ್ನು
ಕೇಳುತ್ತಿರುವಾಗಲೇ ನಿದ್ದೆ ಮಾಡುತ್ತಿದ್ದರು. ಈ ಪರಿಪಾಟ ಈಗಲೂ ಹಿರಿಯರು
ಇರುವ ಮನೆಗಳಲ್ಲಿ ನಡೆಯುತ್ತಿದೆ. ಆದರೂ ಈ ಬಗ್ಗೆ ಮೊದಲಿದ್ದ ಪ್ರಾಶಸ್ತ್ರ ಕಡಿಮೆ
ಆಗಿದೆ. ಕಾರಣ ದೊಡ್ಡ ಕುಟುಂಬಗಳ ಬದಲಿಗೆ ಚಿಕ್ಕ ಚಿಕ್ಕ ಕುಟುಂಬಗಳು ಬಾಳುವ
ವ್ಯವಸ್ಥೆ ರೂಢಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಜ್ಜ ಅಜ್ಜಿಯರ ಸ್ಥಾನವನ್ನು ನರ್ಸರಿ
ಶಾಲೆಗಳು ಮತ್ತು ಅಚ್ಚಾದ ಪುಸ್ತಕಗಳು ಆಕ್ರಮಿಸಿವೆ.
ಜ್ಞಾನವು ತೊಟ್ಟಿಲಿನಿಂದ ಸಮಾಧಿವರೆಗೆ ಸಾಗುವ ನಿರಂತರ ಕಾರ್ಯ
ಚಟುವಟಿಕೆ ಎಂಬ ಅಂಶವನ್ನು ಎಲ್ಲರೂ ಒಪ್ಪತಕ್ಕದ್ದು, ಓದುಗಾರಿಕೆಯು ಮಕ್ಕಳಿಗೆ
ಆರನೇ ವರ್ಷದಿಂದ ಆರಂಭವಾಗುತ್ತದೆ. ಅರು ವರ್ಷದಿಂದ ಹಿಡಿದು
ವೃದ್ಧಾಪ್ಯದವರೆಗೂ ಓದಬಹುದು. ಆದ್ದರಿಂದ ಪ್ರತಿಮನೆಯಲ್ಲಿಯೂ ಒಂದೊಂದು
ಪುಟ್ಟ ಗ್ರಂಥಾಲಯವಿರಬೇಕು. ನಮ್ಮ ಮನೆಯ ಪುಟ್ಟ ಗ್ರಂಥಾಲಯಗಳಲ್ಲಿ ಎಲ್ಲ
ಧರ್ಮಗಳನ್ನು ತಿಳಿದುಕೊಳ್ಳುವ ಧಾರ್ಮಿಕ ಗ್ರಂಥಗಳು, ವಿಷಯ ವಿಶ್ವಕೋಶ.
ನಿಘಂಟುಗಳು, ಮನೆಮದ್ದು, ಔಷಧ, ಕ್ರೀಡೆ, ಭಾಷೆ, ಅಡಿಗೆ, ಪರಿಸರ, ಚರಿತ್ರೆ,
ವಿಜ್ಞಾನ, ಕತೆ, ಕಾದಂಬರಿ, ಕವನ, ಸಂಸ್ಕೃತಿ ಇಂತಹ ಮುಖ್ಯ ವಿಭಾಗಗಳಲ್ಲಿ
ಕೆಲವಾದರೂ ಇರಬೇಕು. ಇಂತಹ ಸಂಗ್ರಹಗಳು ನಮ್ಮ ಮನೆಗಳಲ್ಲಿದ್ದರೆ ಮನೆ
ಮಂದಿಯೆಲ್ಲರೂ ಪುಸ್ತಕ ಜ್ಞಾನವನ್ನು ಪಡೆಯಲು ಖಂಡಿತ ಸಾಧ್ಯ.
206 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...