Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/220

This page has been proofread.

ಬಹುಕಾಲ ಬಾಳಿಕೆ ಬರುತ್ತವೆ. ಪುಸ್ತಕಗಳನ್ನು ಸಂಗ್ರಹದಿಂದ ತೆಗೆಯುವಾಗ ಅದರ ಬೆನ್ನನ್ನು ಹಿಡಿದೆಳೆಯದೇ ಸರಿಯಾಗಿ ಪುಸ್ತಕವನ್ನು ಹಿಡಿದುಕೊಂಡು ತೆಗೆಯಬೇಕು. ಕೆಳಗೆ ಬೀಳಿಸುವುದಾಗಲೀ, ಅವುಗಳ ಮೇಲೆ ಕುಳಿತುಕೊಳ್ಳುವುದಾಗಲೀ, ತಲೆದಿಂಬಿನ ಹಾಗೆ ಉಪಯೋಗಿಸುವುದಾಗಲೀ,ಪೆನ್ನು , ಪೆನ್ಸಿಲಿನಿಂದ ಬರೆಯುವುದಾಗಲೀ, ಹಾಳೆಗಳ ಕಿವಿ ಮಡಿಚಿ ಇಡುವುದಾದಲೀ ಬೆನ್ನು ಕೆಳಗೆ ಮುರಿಯುವುದಾಗಲೀ ನಿಷಿದ್ಧ.
ಬೆಳಕು, ಕತ್ತಲೆ ಹಾಗೂ ಗಾಳಿಯಿಂದಲೂ ಪುಸ್ತಕಗಳು ನಶಿಸುತ್ತವೆ. ಸೂರ್ಯನ ಬೆಳಕು ಮತ್ತು ಶಾಖದಿಂದ ಕಿರಣಗಳು ನೇರವಾಗಿ ಗ್ರಂಥಗಳ ಮೇಲೆ ಬೀಳದಂತೆ ಜಾಗ್ರತೆ ವಹಿಸಬೇಕು. ಸೂರ್ಯನ ಬೆಳಕು ಹಾಗೂ ಶಾಖದಿಂದ ಹಲವಾರು ಕ್ರಿಮಿಕೀಟಗಳನ್ನು ದೂರವಿಡಬಹುದಾದರೂ ಸೂರ್ಯನ ಶಾಖದಿಂದ ಹಾಳೆಗಳು ಸತ್ವಹೀನವಾಗುತ್ತದೆ. ಹಾಗೆಯೇ ಕತ್ತಲಿನಲ್ಲಿ ಗ್ರಂಥಗಳನ್ನಿಟ್ಟರೆ ಶೀತಾಂಶ ಹೆಚ್ಚಿ ಬೂಷ್ಟು ಬರಲು ಅವಕಾಶವಾಗುತ್ತದೆ. ಅಲ್ಲದೆ ಕ್ರಿಮಿಕೀಟಗಳು ಹೆಚ್ಚಲು ಸಹಾಯವಾಗುತ್ತದೆ. ಗಾಳಿಯಿಂದಲೂ ಗ್ರಂಥಗಳಿಗೆ ಕೆಡುಕಾಗುತ್ತದೆ. ಗಾಳಿಯು ಹೆಚ್ಚು ಉಷ್ಣತೆಯಿಂದಾಗಲೀ ಇಲ್ಲವೇ ಹೆಚ್ಚು ಶೀತದಿಂದಾಗಲೀ ಕೂಡಿದ್ದರೆ ಗ್ರಂಥಗಳಿಗೆ ಅಪಾಯ ತಪ್ಪಿದ್ದಲ್ಲ. ಉಷ್ಣತೆ ಜಾಸ್ತಿಯಾದರೆ ಗ್ರಂಥಗಳ ಕಾಗದ, ಹೊದಿಕೆಯ ರಟ್ಟು ಮೊದಲಾದವುಗಳು ಒಣಗಿ ಒರಟಾಗಿ ಒರಟಾಗಿ ಹರಿಯುವಂತಾಗಬಹುದು. ಶೀತ ಹೆಚ್ಚಿ ಬೂಷ್ಟು ಬಂದರೆ ಗ್ರಂಥಗಳಿಗೆ ಉಪಯೋಗಿಸಿದ ಅಂಟು ಸಡಿಲವಾಗುತ್ತದೆ. ಅಲ್ಲದೆ ಕಾಗದ ಮತ್ತು ಹೊದಿಕೆ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಗೆಯೇ ಗಾಳಿಯಲ್ಲಿನ ಕೆಲವು ಅನಿಲಗಳು ಕಾಗದದ ಕ್ಷೀಣತೆಗೆ ದಾರಿಮಾಡಿಕೊಡುತ್ತದೆ. ಧೂಳಿನಿಂದ ಗ್ರಂಥಗಳಿಗೆ ಆಗುವ ಅನಾಹುತ ಅಲ್ಪವಲ್ಲ. ಧೂಳಿನ ಮೂಲಕವಾಗಿಯೇ ಕೀಟಗಳ ಅಂಡಾಣುಗಳು ಹೊರಗಿನಿಂದ ಬಂದು ಗ್ರಂಥದಲ್ಲಿ ಸೇರಲು ಸಹಾಯವಾಗುತ್ತದೆ. ಆದ್ದರಿಂದ ಗಾಳಿಯ ಮೂಲಕ ಬರುವ ಧೂಳನ್ನು ತುಂಬ ಅಚ್ಚು ಕಟ್ಟಾಗಿ ಹೊರತೆಗೆಯುವ ಪ್ರಯತ್ನ ಮಾಡಬೇಕು. ಬಟ್ಟೆಯಿಂದ ಪುಸ್ತಕದ ಎಲ್ಲಾ ಭಾಗಗಳನ್ನು ಒರೆಸುವುದರಿಂದಲೂ, ಮೃದುವಾಗ ಮೊರಕೆಯಿಂದಲೂ ಸಾಕಷ್ಟು ದೂಳನ್ನು ತೆಗೆಯಬಹುದು. ಕಪಾಟುಗಳಲ್ಲಿ ಪುಸ್ತಕಗಳನ್ನು ಸಂಗ್ರಹಿಸುವಾಗ ಒಟೊಟ್ಟಿಗೆ ಪುಸ್ತಕಗಳನ್ನಿಡಬೇಕು. ದೊಡ್ಡ ಗಾತ್ರದ ಪುಸ್ತಕಗಳನ್ನು ನಿಲ್ಲಿಸಿಡುವುದಕ್ಕಿಂತ ಮಲಗಿಸಿಡುವುದು ಒಳ್ಳೆಯದು. ಯಾಕೆಂದರೆ

208 ತುಳುನಾಡಿನಲ್ಲಿ ಬಾಸೆಲ್ ಮಿಷನ್ ಮತ್ತಿತರ ಲೇಖನಗಳು..