Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/222

This page has been proofread.

ಕಬಾಟುಗಳನ್ನಿಡಬಾರದು. ಗ್ರಂಥ ಸಂಗ್ರಹಕ್ಕೆ ಕಬ್ಬಿಣದ ಕಬಾಟುಗಳು ಸೂಕ್ತ (ತುಕ್ಕು ಹಿಡಿಯದಂತೆ ಜಾಗ್ರತೆವಹಿಸಬೇಕು) ಇತ್ತೀಚೆಗೆ ಮಾರ್ಬಲ್ ಹಲಗೆಗಳ ಕಬಾಟುಗಳನ್ನು ದೊಡ್ಡ ದೊಡ್ಡ ಗ್ರಂಥಾಲಯಗಳಲ್ಲಿ ಉಪಯೋಗಿಸುತ್ತಾರೆ.
ಗ್ರಂಥಗಳು ಕ್ರಿಮಿಗಳಿಂದ ದೂರವಿರಬೇಕಾದರೆ ಯಾವಾಗಲೂ ಪುಸ್ತಕವನ್ನು ಉಪಯೋಗಿಸುತ್ತಿರಬೇಕು. ಉಪಯೋಗಿಸದ ಪುಸ್ತಕಗಳನ್ನು ವರ್ಷಕ್ಕೆರಡು ಬಾರಿಯಾದರೂ ತೆಗೆದು ಧೂಳು ಜಾಡಿಸಿ ತಿರುಗಿ ಕಪಾಟಿನಲ್ಲಿ ಜೋಡಿಸಬೇಕು. ಗ್ರಂಥಾಲಯಕ್ಕೆ ದಾನವಾಗಿ ಬರುವ ಹಳೆಯ ಪುಸ್ತಕಗಳನ್ನು ಸೇರಿಸುವಾಗ ಹುಳುಗಳು ಇಲ್ಲವೆಂದು ಖಾತ್ರಿಮಾಡಿಕೊಳ್ಳಬೇಕು. ಬೇವಿನ ಎಲೆ, ಹೊಗೆಸೊಪ್ಪು, ನೆಕ್ಕಿಸೊಪ್ಪು ಇಡುವುದರಿಂದ ಕ್ರಿಮಿಕೀಟದಿಂದ ದೂರವಿರಬಹುದು(ಪುಸ್ತಕಕ್ಕೆ ತಾಗದಂತೆ ಜಾಗ್ರತೆ ವಹಿಸಬೇಕು) ಬಜೆ-ಕೆತ್ತೆ, ಕಾಳುಜೀರಿಗೆ-ಕರ್ಪೂರ ಇವುಗಳ ಮಿಶ್ರಣದ ಪುಡಿಯನ್ನು ಬಟ್ಟೆಯಲ್ಲಿ ಕಟ್ಟಿ ಕಪಾಟಿನಲ್ಲಿಡುವುದೂ ಒಂದು ವಿಧಾನ. ಕ್ರಿಮಿನಾಶಕ ಸಿಂಪಡಿಸಿ ಕ್ರಿಮಿಗಳನ್ನು ಕೊಲ್ಲುವ ವಿಧಾನವೂ ಕೆಲವು ಗ್ರಂಥಾಲಯಗಳಲ್ಲಿವೆ. (ಆದರೆ ಕ್ರಿಮಿನಾಶಕದ ಪ್ರಮಾಣ ಹೆಚ್ಚಾದರೆ ಸಿಬ೦ದಿವರ್ಗದವರು,ಓದುಗರು ಉಸಿರಾಟದ ತೊಂದರೆಯನ್ನು ಅನುಭವಿಸಬೇಕಾದೀತು.)
ಹಸ್ತಪ್ರತಿ, ಕಡತ, ಫೋಟೋಗಳ ಸಂರಕ್ಷಣೆ: ಹಸ್ತಪ್ರತಿಗಳು ಪುಸ್ತಕ ರೀತಿಯಲ್ಲಿದ್ದರೆ ಮೇಲಿನ ರೀತಿಯಲ್ಲಿಯೇ ಜೋಪಾನ ಮಾಡುವುದು. ನೆಟ್ಟಗೆ ನಿಲ್ಲಿಸುವುದಕ್ಕಿಂತ ಮಲಗಿಸಿಡುವುದು ಉತ್ತಮ. ಕಡತಗಳಲ್ಲಿರುವ ತುಕ್ಕು ಹಿಡಿದ ಎಲ್ಲಾ ಪಿನ್ನುಗಳನ್ನು ತೆಗೆದು ಹರಿದ ಹಾಳೆಗಳಿದ್ದಲ್ಲಿ ಒಂದೊಂದು ಬಿಳಿ ಹಾಳೆಗಳನ್ನು ಸೇರಿಸುವುದರಿಂದ ಬಾಳಿಕೆಯೂ ಬರುತ್ತದೆ, ಉಪಯೋಗಿಸಲೂ ಬರುತ್ತದೆ. ಕಡತಗಳನ್ನು ಪಿನ್, ಕಬ್ಬಿಣದ ಕ್ಲಿಪ್‌ಗಳಿರದ ಉತ್ತಮ ಫೈಲ್‌ಗಳಲ್ಲಿ ಹಾಕಿ ಬಟ್ಟೆ ನೂಲಿನಿಂದ ಕಟ್ಟಿಡಬೇಕು. ಪ್ಲಾಸ್ಟಿಕ್ ಹಾಳೆಗಳಲ್ಲಿ ಹಾಕಲೇಬಾರದು. ಫೋಟೋಗಳನ್ನು ಆಲ್ಬಂನಿಂದ ಬೇರ್ಪಡಿಸಿ ಪ್ರತಿಯೊಂದು ಫೋಟೋವಿಗೂ ಬಟರ್ ಪೇಪರ್ ಲಕೋಟೆಯನ್ನು ಹಾಕಬೇಕು. ಒಂದರ ಮೇಲೆ ಒಂದು ಫೋಟೋಗಳನ್ನು ಇಡಬಾರದು. ಪ್ಲಾಸ್ಟಿಕ್ ಲಕೋಟೆಗಳಲ್ಲಿ ಹಾಕಬಾರದು.
ಪುಸ್ತಕ ಜ್ಞಾನ ಮಾತೃ ಸ್ವರೂಪ, ಅದು ಒಂದು ಗೊತ್ತಾದ ಆಯಕಟ್ಟಿನಲ್ಲಿ ಜ್ಞಾನವನ್ನು ಸಂಘಟನೆಗೊಳಿಸುತ್ತದೆ. ಜ್ಞಾನ ಹೆಚ್ಚಿಸುವ ಪುಸ್ತಕಗಳಲ್ಲಿ ಚಿಕ್ಕದು

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...210