Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/24

This page has been validated.

was not only very clever workman, but also a humble. Tommy's Father, a Chinese officer of rank, having fallen in an encounter with the British, the orphan, then about years old, was brought to India by an English lady. By and bye the boy showed an unmanageable temper and was given over the Boys' Institution at Mangalore. Having passed through it, he became apprentice in the Bookbindery. Mr. Piebst trained him in the casting business, which he learned thoroughly, so that for many years this branch of the Establishment could with full confidence to entrusted to him" (BM. Report 1865)

ಹೊಸ ಮುದ್ರಣ ವ್ಯವಸ್ಥೆಯಲ್ಲಿ ಮೊದಲಿಗೆ ಬಾಸೆಲ್ ಮಿಶನ್‌ನ 13ನೇ ವರ್ಷದ ವರದಿಯು ಜರ್ಮನಿಯಿಂದ ತಂದ ಇಂಗ್ಲಿಷ್ ಮೊಳೆಗಳನ್ನು ಉಪಯೋಗಿಸಿ ಇಂಗ್ಲಿಷ್‌ನಲ್ಲಿ ಮುದ್ರಣಗೊಂಡಿತು. 1853ರಿಂದ ಕನ್ನಡ ಮೊಳೆಗಳ ತಯಾರಿ ನಡೆದು ಕನ್ನಡದಲ್ಲಿ ಕನ್ನಡ ಪಂಚಾಂಗ ಮುದ್ರಣವಾಗುವುದರೊಂದಿಗೆ ಇಲ್ಲಿ ಅಚ್ಚುಮೊಳೆಗಳ ಕನ್ನಡ ಮುದ್ರಣ ಪ್ರಾರಂಭವಾಯಿತು. ಫೆಸ್ಟ್ ನಾಯಕತ್ವದಲ್ಲಿ ಪ್ರೆಸ್‌ನಲ್ಲಿ ಪ್ರತ್ಯೇಕ ಬೈಂಡಿಂಗ್ ವ್ಯವಸ್ಥೆ ಮಾಡಲಾಯಿತು. ಉಚ್ಚಿಲದಿಂದ ಬಂದ ಲೂಕಸ್ ಜೋಶ್ವ ಎಂಬಾತನನ್ನು ಬಳ್ಳಾರಿ, ಮದ್ರಾಸ್ ಮುಂತಾದೆಡೆಗೆ ಕಳುಹಿಸಿ ಬೈಂಡಿಂಗ್ ತರಬೇತುಗೊಳಿಸಿ ಇದರ ಮುಖ್ಯಸ್ಥನನ್ನಾಗಿ ನೇಮಕ ಮಾಡಿತು. ಬೈಂಡಿಂಗ್ ವಿಭಾಗವನ್ನು ಬಾಸೆಲ್ ಮಿಶನ್ ಪ್ರತ್ಯೇಕ ಕಟ್ಟಡ ನಿರ್ಮಿಸಿ ಮುಂದುವರೆಸುತ್ತಿತ್ತು. ಮುಂದಕ್ಕೆ ಆ ವಿಭಾಗವನ್ನು ಜೋಶ್ವರವರೇ ನಡೆಸುತ್ತಿದ್ದರು. ಮುಂದಕ್ಕೆ ಅವರ ನಾಯಕತ್ವದಲ್ಲಿ ಮುನ್ನಡೆದು "ಜೋಶ್ವ ಬೈಂಡಿಂಗ್ ವರ್ಕ್ಸ್" ಎಂಬ ಹೆಸರಿನಲ್ಲಿ ಮುಂದುವರಿದಿತ್ತು. ಈ ವಿಭಾಗವು ಪ್ರಸ್ತುತ ಅಥನಾ ಆಸ್ಪತ್ರೆಯಿರುವ ಸ್ಥಳದಲ್ಲಿದ್ದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ಮುದ್ರಣಗೊಳ್ಳುತ್ತಿದ್ದ ಪುಸ್ತಕಗಳೆಲ್ಲವನ್ನು ಇಲ್ಲಿಯೇ ಬೈಂಡ್ ಮಾಡಲಾಗುತ್ತಿತ್ತು. ಬಾಸೆಲ್ ಮಿಶನ್ ಸಂಸ್ಥೆಯು ಭಾರತದಲ್ಲಿ ಸ್ಥಾಪಿಸಿದ ಮತ್ತು ಮುಂದಕ್ಕೆ ಸ್ಥಾಪಿಸಲಿರುವ ಕಾರ್ಖಾನೆಗಳಿಗಾಗಿ ಮರ್ಕಂಟೈಲ್ ಎಷ್ಟಾಬ್ಲಿಷಮೆಂಟ್ (Marcantile establishment) ವಿಭಾಗವನ್ನು ತೆರೆದು ಮಿಶನ್ (ಕ್ರೈಸ್ತ ಸಭೆ ಮತ್ತು ಶಾಲೆ)ನಿಂದ ಉದ್ಯೋಗ ನೀಡುವ ಮಾರಾಟ ಮಾಡುವ ವ್ಯವಸ್ಥೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿತು.

1858ರಿಂದ ಹೊಸ ಮೊಳೆಗಳನ್ನು ಮಾಡಿಸುವುದಕ್ಕೂ ಹೊಯಿಸುವುದಕ್ಕೂ


12
ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...