ಮಿಲಾಗ್ರಿಸ್ ಶಾಲೆ, ಶಾಲೆ, ದೇವಾಲಯ, ವಿವಿಧ ಸಂಘ ಸಂಸ್ಥೆಗಳ ಸ್ಮರಣ ಸಂಚಿಕೆಗಳು ಇಲ್ಲಿ ಮುದ್ರಣಗೊಂಡಿದೆ.
ತುಳು ಭಾಷಾ ಸಾಹಿತ್ಯ ಮತ್ತು ಬಾಸೆಲ್ ಮಿಶನ್:- 1871ರಲ್ಲಿ ಪ್ರಕಟವಾದ Charles E. Gover ಬರೆದ Folk Songs of Southern India ಪುಸ್ತಕದಲ್ಲಿ ಕನ್ನಡ, ಬಡಗ, ಕೊಡವ, ತಮಿಳು, ಕುರಲ್, ಮಲಯಾಳಂ, ತೆಲುಗು ಹಾಡುಗಳಿದ್ದು ತುಳು ಭಾಷೆಯ ಹಾಡುಗಳಿಲ್ಲ. ಇದಕ್ಕೆ ಕಾರಣ 1886ರಲ್ಲಿ ಮೆನ್ನರ್‌ನ ತುಳು ಪಾಡ್ಡನ ಕನ್ನಡ ಲಿಪಿಯಲ್ಲಿ ಪ್ರಕಟವಾದದ್ದು. 1840ಕ್ಕಿಂತಲೂ ಹಿಂದೆ ತುಳು ಭಾಷೆಯನ್ನು ಕನ್ನಡ ಲಿಪಿ ಬಳಸಿ ಬರೆಯುವ ಕ್ರಮವಿದ್ದರೂ ಜಿಲ್ಲೆಯಲ್ಲಿ ಮುದ್ರಣದ ವ್ಯವಸ್ಥೆ ಇಲ್ಲದ ಕಾರಣ ಅದು ಬೆಳಕಿಗೆ ಬಂದಿರಲಿಲ್ಲ. ತುಳು ಲಿಪಿಯ ಬಗ್ಗೆ ಚಿಂತಿಸದೆ ಕನ್ನಡದ ಲಿಪಿಯನ್ನು ಬಳಸಿ ತುಳುವನ್ನು ಮುದ್ರಿಸುವ ಕಾರ್ಯಕ್ಕೆ ಕೈ ಹಚ್ಚಿದರು. ಮಿಶನರಿಗಳ ತುಳು ಮುದ್ರಣ ಮತ್ತು ತುಳು ಶಿಕ್ಷಣದ ಬಗ್ಗೆ 1891ರಲ್ಲಿ ಪ್ರಕಟವಾದ Christian Patriot, Oct, 1891 ಪತ್ರಿಕೆಯೊಂದರಲ್ಲಿ ಹೀಗೆ ಉಲ್ಲೇಖಿಸಿದ್ದಾರೆ. The Tulu First Book Published by the Basel Missionaries as a stepping stone to the study of the canarese alphabet - The Tulu has an alphabets of its own (a form of Malayalam Characters) which is not in use at all and is not known to any of the Tulu-speaking people except to few hariga Brahmins who learn it, if at all, more as a matter of curiosity than for any purpose which it serves. If therefore Tulu is introduced into schools it will have to be, and I thank it is proposed to be written in Canarese characters which are quite in adequate to represent a great many of the sounds peculiar to Tulu. If the Tulu alphabet is also introduced along with the language it will add considerably to the burden on the memory of children who will have to learn the Canarese and English alphabets later on.
1841ರಲ್ಲಿ ಮೊದಲಿಗೆ ಕಲ್ಲಚ್ಚು ಮುದ್ರಣದಲ್ಲಿ ತುಳು ಕೃತಿಯೊಂದು ಮುದ್ರಣವಾಗುವುದರೊಂದಿಗೆ ಆರಂಭವಾದ ತುಳು ಮುದ್ರಣವು ಇಂಗ್ಲಿಷ್ ತುಳು ನಿಘಂಟು, ತುಳು ಇಂಗ್ಲಿಷ್ ತುಳು ನಿಘಂಟು, ತುಳು ವ್ಯಾಕರಣ, ಪಾಡ್ಡನೊಳು, ತುಳುವೆರೆಡ್ ನಡಪು ಭೂತಸೇವೆ, ತುಳು ಗಾದೆಗಳು, ತುಳು ಸತ್ಯವೇದ, ತುಳು