Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/78

This page has been validated.

ಇಡುವುದಕ್ಕೆ ಸಾಕಷ್ಟು ಹಣವನ್ನು ಕೌನ್ಸಿಲಿಗೆ ಕೊಟ್ಟ ಯಾರೋ ಪುಣ್ಯಾತ್ಮರು ಇನ್ನೂ ಕೃತಾರ್ಥರಾಗಲಿಲ್ಲ. ಇಂಥವರಿಗೆ ಏನು ಸಮಾಧಾನ ಹೇಳಬೇಕು ? ಕೆಳಗಿನ ಶ್ಲೋಕವನ್ನು ಜಪಿಸಿ ಶೋಕವನ್ನು ಮರೆಯಲಿ.” ಎಂದು ಬರೆಯುತ್ತಾರೆ.

ಮೂಕ ಮುನ್ಸಿಪಾಲಿಟಿಗೆ ನೂರ್ಕಾಸು ಕೊಟ್ಟರು
ಗೋಕಲ್ಲ ಕಟ್ಟೆಂದು ಬೇಡಿದರು, ಅದು ತಾನು
ನೀರ್ಕೊಂಬುದೇ ಸರ್ವಜ್ಞ

ಕ್ರೈಸ್ತ ಸಭಾಪತ್ರ (1867-1895) ಬಾಲಪತ್ರ (1869-1871) ಮುಂತಾದ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದು ಇವುಗಳು ಧಾರ್ಮಿಕ ಪತ್ರಿಕೆಗಳಾದರೂ ಸ್ಥಳೀಕ ವಾರ್ತೆಗಳಿಗೆ ಸ್ಥಳವಕಾಶವನ್ನು ಒದಗಿಸಿತ್ತು. ನ್ಯಾಯಸಂಗ್ರಹ (1868) ಈ ಪತ್ರಿಕೆ ಬಾಸೆಲ್ ಮಿಶನ್ ಪ್ರೆಸ್ಸಿನ ಮುದ್ರಣವಾದರೂ ಇದರ ಪ್ರಕಾಶಕರು ಮಂಗಳೂರಿನ ಯು. ಗೋಪಾಲ ಕೃಷ್ಣಯ್ಯ, ಮತ್ತು ಸುಭೋಧಿನಿ (1871) ಈ ಪತ್ರಿಕೆಯ ಪ್ರಕಾಶಕರು ಮಂಗಳೂರಿನ ಎಲ್‌. ರಾಮರಾವ್. ಈ ಎರಡು ಪತ್ರಿಕೆಗಳು ಕೋರ್ಟು, ನ್ಯಾಯ, ವ್ಯಾಜ್ಯ ಮುಂತಾದ ವಿಷಯಗಳಿಗೆ ಸಂಬಂಧಪಟ್ಟಿದ್ದು ತಿಂಗಳಿಗೆರಡಾವರ್ತಿ ಪ್ರಕಟಗೊಳ್ಳುತ್ತಿತ್ತು.

ಚರಿತ್ರೆ ಹೇಳುವ ಕನ್ನಡ ಪಂಚಾಂಗ. (1853-1936) ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ಪ್ರಕಟವಾದ ಕನ್ನಡ ಪಂಚಾಂಗ ವಾರ್ಷಿಕ ಪತ್ರಿಕೆ 1853 ರಿಂದ ಕಾಸರಗೋಡಿನ ಶ್ರೀ ಪುತ್ಥಳಿ ದಾಸಪ್ಪಯ್ಯನವರ ಪುತ್ರ ಶ್ರೀ ಪುತ್ಥಳಿ ಬಾಳಪ್ಪಯ್ಯನವರು ಆರ್ಯಭಟೀಯ ವ್ಯಾಕರಣ ರೀತ್ಯಾ ಪಂಚಾಂಗವನ್ನು ರಚಿಸುತ್ತಿದ್ದರು. ಬಾಳಪ್ಪಯ್ಯನವರು ಆಂಗ್ಲ ಜ್ಯೋತಿಷ್ಯವನ್ನೂ ಅಭ್ಯಾಸ ಮಾಡಿದವರಾಗಿದ್ದು ಆಗ ಪ್ರಚಲಿತವಾಗಿದ್ದ 'ನಾವಿಕ ಪಂಚಾಂಗ'ದ ಆಧಾರಗಳನ್ನು ಪಡೆದಿದ್ದರು. 1877ರಿಂದ ಈ ಪಂಚಾಂಗವು ದೃಗಣಿತ ರೀತ್ಯಾ ಗಣಿಸಲ್ಪಟ್ಟು 'ಕನ್ನಡ ಪಂಚಾಂಗ'ವೆಂಬ ಹೆಸರಿನಿಂದ ಪ್ರಕಟವಾಗುತ್ತಿತ್ತು. ಅವರ ಕಾಲಾನಂತರದಲ್ಲಿ 1914ರಿಂದ ಈ ಪಂಚಾಂಗವು ವಾಕ್ಯರಣರೀತ್ಯಾ ಗಣಿಸಲ್ಪಡುತ್ತಿತ್ತು. 1936ರಿಂದ ಈ ಪಂಚಾಂಗದ ಪ್ರಕಟಣೆಯು ನಿಂತು ಹೋಗಿರುತ್ತದೆ. 1847 ರಿಂದ ಹಸ್ತಪ್ರತಿ ರೂಪದಲ್ಲಿ ಪಂಚಾಂಗ ಪ್ರಕಟನೆಯು ಜಿಲ್ಲೆಯಲ್ಲಿ ಆರಂಭವಾಗಿದ್ದರೂ 1853 ರಿಂದ ಮುದ್ರಣಗೊಂಡು ಪ್ರಕಟಗೊಳ್ಳಲು ಪ್ರಾರಂಭವಾಯಿತು.
1853ರಲ್ಲಿ ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ 73 ಪುಟಗಳ ಮೊದಲ ಕನ್ನಡ ಪಂಚಾಂಗವು 1000 ಪ್ರತಿಗಳಾಗಿ ಮುದ್ರಣಗೊಂಡಿದೆ ಎಂಬುದಾಗಿ 1855ರ ಮಿಶನರಿ ವರದಿಯಲ್ಲಿ ಕಂಡುಬರುತ್ತದೆ. ವರದಿಯಲ್ಲಿ ಇದರ ಹೆಸರನ್ನು

66 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...