Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/88

This page has been proofread.

ದಿನದ ಸಂಚಿಕೆಯೇ ಈ ಪತ್ರಿಕೆಯ ಕೊನೇ ಸಂಚಿಕೆಯೆಂಬುದನ್ನು ನಾವು ವಾಚಕರಿಗೆ ಶ್ರುತಪಡಿಸುವ ಕಾರ್ಯವನ್ನು ಇಂದು ಮಾಡಬೇಕಾಗಿದೆ. ನಾಲ್ಕುವರೆ ವರ್ಷಗಳ ಹಿಂದೆ ನಾವು ಈ ಪತ್ರಿಕೆಯ 50ನೇ ವಾರ್ಷಿಕೋತ್ಸವವನ್ನು ನಡೆಸಿದಾಗ ಪ್ರಕಟಿಸಿದ ಈ ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಹಿಂದೆ ಈ ಪತ್ರಿಕೆಯಲ್ಲಿ ಸಂಪಾದಕರಾಗಿದ್ದವರೊಬ್ಬರು ವೃತ್ತಾಂತ ಪತ್ರಿಕೆಯ ಸ್ಥಾಪಕರಾದ ಹೆನ್ರಿ ಹೇಗ್‌ರವರು ಈ 50ನೇ ವರ್ಷೋತ್ಸವದ ಸಂಚಿಕೆಯನ್ನು ನೋಡಿದ್ದರೆ ಅವರು ಆಶ್ಚರ್ಯಚಕಿತರಾಗುತ್ತಿದ್ದರಲ್ಲದೆ ಅತ್ಯಂತ ಸಂತೋಷಭರಿತರೂ ಆಗುತ್ತಿದ್ದರೆಂದು ಬರೆದರು. ಆ ಮಹೋತ್ಸವದ ದಿನ ನಾವೆಲ್ಲರೂ ಈ ಪತ್ರಿಕೆಯು ಇನ್ನೂ ಐವತ್ತು ವರ್ಷಗಳ ಕಾಲ ಬಾಳಿ ಬೆಳೆದು ಮೈಸೂರು ಸಂಸ್ಥಾನದ ಪ್ರಜೆಗಳ ಸೇವೆಯನ್ನು ಮಾಡುವುದೆಂದೇ ನಿರೀಕ್ಷಿಸಿಕೊಂಡಿದ್ದೆವು. ಈ ಪತ್ರಿಕೆಯು ನಿಲ್ಲಬೇಕಾಗಿ ಬಂದುದಕ್ಕೆ ಇಂದಿನ ಯುದ್ಧವೇ ಕಾರಣವಾಗಿರುತ್ತದೆ.[{/br}}

ಈ ಪತ್ರಿಕೆಯ ಎರಡನೇ ಐವತ್ತು ವರ್ಷದ ಜೀವನವು ಪ್ರಾರಂಭವಾದಾಗ ಇದನ್ನು ನಾನಾ ಊರುಗಳಲ್ಲಿ ಹಂಚುವವರ ಮತ್ತು ವಾಚಕರ ಸಹಾಯದಿಂದ ಇದರ ಚಂದಾದಾರರ ಸಂಖ್ಯೆ ಎರಡು ವರ್ಷಗಳ ಅವಧಿಯಲ್ಲಿ ಶೇಕಡ ಮೂವತ್ತರಷ್ಟು ಹೆಚ್ಚಿತು. ಅಷ್ಟರಲ್ಲೇ ಯುದ್ಧದ ಭೀತಿ ಪ್ರಪಂಚದಾದ್ಯಂತದಲ್ಲೂ ಹಬ್ಬಿದ್ದುದರಿಂದ ಕಾಗದದ ಬೆಲೆ వీరి ಹೋಯಿತು. ಅದರ ಪರಿಣಾಮವೇನಾಯಿತೆಂದರೆ ನಾವು ಪ್ರಕಟಿಸುತ್ತಿದ್ದ ಹೆಚ್ಚು ಪುಟಗಳಿಂದ ಕೂಡಿದ ಪ್ರತಿಯೊಂದು ಪತ್ರಿಕೆಯ ವಿಕ್ರಯದಿಂದಲೂ ನಮಗೆ ನಷ್ಟವೇ ಆಗಲು ಉಪಕ್ರಮವಾಯಿತು. ಇತ್ತೀಚಿನ ವರ್ಷಗಳಲ್ಲಿ ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹಿರಾತುಗಳ ಸಂಖ್ಯೆ ಹೆಚ್ಚಿದಾಗ್ಯೂ ಕಳೆದ ನಾಲ್ಕು ವರ್ಷಗಳಿಂದಲೂ ನಮಗೆ ವರ್ಷವರ್ಷವೂ ಆಗುತ್ತಿರುವ ನಷ್ಟ ಬಹಳ ದುಬಾರಿಯಾಗಿರುತ್ತದೆ. ಮೇಲಾಗಿ ಯುದ್ಧಕ್ಕಾಗಿ ಅಪಾರವಾದ ಹಣ ಖರ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಮೊದಲಿನಂತೆ ಇಂಗ್ಲಾಂಡಿನಲ್ಲಿರುವ ನಮ್ಮ ಮಿತ್ರರಿಂದ ನಾವು ದ್ರವ್ಯ ಸಹಾಯ ನೀರೀಕ್ಷಿಸುವುದು ನ್ಯಾಯವಾದುದಲ್ಲ. ಅವರ ಸಹಾಯವನ್ನು ಬಿಟ್ಟರೆ ನಮ್ಮ ಪತ್ರಿಕೆಯನ್ನು ಮು೦ದುವರಿಸಲು ಪಾಶ್ಚಿಮಾತ್ಯ ದೇಶದಲ್ಲಾಗಲಿ ಹಿಂದೂಸ್ಥಾನದಲ್ಲಾಗಲಿ ನಮಗೆ ಸಹಾಯ ನೀಡುವವರಾರೂ ಇರುವುದಿಲ್ಲ. ನಮ್ಮ ಖರ್ಚುವೆಚ್ಚಗಳನ್ನು ಕಡಿಮೆಮಾಡಿ ನಮ್ಮ ಆದಾಯವನ್ನು ಹೆಚ್ಚಿಸುವುದಕ್ಕಾಗಿ ನಮ್ಮ ಕೈಲಾದ ಪ್ರಯತ್ನಗಳನ್ನೆಲ್ಲವನ್ನೂ ಮಾಡಿದೆವು. ಈ ವಿಷಯದಲ್ಲಿ ನಮ್ಮಿಂದ ಮುಂದೇನನ್ನೂ ಮಾಡುವುದು ಸಾಧ್ಯವೇ ಇಲ್ಲ. ನಮ್ಮಿ ಪತ್ರಿಕೆಯನ್ನು ನಡೆಸಲು ಈ

76

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...