Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/96

This page has been proofread.

ಜನವಾಹಿನಿ ಮುಂತಾದ ಹಲವಾರು ಪತ್ರಿಕೆಗಳು ಹುಟ್ಟಿ ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ನಾವು ಎಂದೂ ಮರೆಯುವಂತಿಲ್ಲ.

ವ್ಯಾವಸಾಯಿಕ ಪಂಚಾಂಗ :- ಬಾಸೆಲ್ ಮಿಶನ್ ಪ್ರೆಸ್‌ನಲ್ಲಿ ವ್ಯಾವಸಾಯಿಕ ಪಂಚಾಂಗ ಎಂದು ಕರೆಯಲ್ಪಡುವ ಒಂದು ಪಂಚಾಂಗ ಮುದ್ರಣಗೊಳ್ಳುತ್ತಿತ್ತು. ಇದನ್ನು ದಕ್ಷಿಣ ಕನ್ನಡ ಜಿಲ್ಲೆಯ ವ್ಯವಸಾಯ ಸಂಘದವರು ಪ್ರಕಟಿಸುತ್ತಿದ್ದರು. 1910ರಲ್ಲಿ ಪ್ರಕಟವಾದ ಪಂಚಾಂಗದಲ್ಲಿ ವರ್ಷದ 12 ತಿಂಗಳುಗಳ ಪಂಚಾಂಗವಲ್ಲದೆ ಕೃಷಿಗೆ ಸಂಬಂಧಪಟ್ಟ ಹಲವಾರು ಮಾಹಿತಿಗಳಿವೆ.

MANGALORE MAGAZINE, (1897) ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಇವರು 1897ರಂದು ಪ್ರಾರಂಭಿಸಿದ ಈ ತ್ರೈಮಾಸಿಕ ಪತ್ರಿಕೆಯು 1914ರಲ್ಲಿ ವಾರ್ಷಿಕ ಸಂಚಿಕೆಯಾಗಿ 1933ರಲ್ಲಿ ತನ್ನ ಪ್ರಕಟಣೆಯನ್ನು ನಿಲ್ಲಿಸಿ 1934ರ ನಂದರ ಕಾಲೇಜು ವಾರ್ಷಿಕ ಸಂಚಿಕೆ ಆರಂಭವಾಗಿ ಈಗಲೂ ಬೇರೆ ಬೇರೆ ಹೆಸರಿನಿಂದ ಈ ಸಂಚಿಕೆ ನಿರಂತರವಾಗಿ ಬರುತ್ತಿದೆ.

ಈ ಪತ್ರಿಕೆಯು ಕಾಲೇಜಿಗೆ ಹಾಗೂ ಮಂಗಳೂರಿಗೆ ಸಂಬಂಧಿಸಿದ ಹಾಗೂ ಇತರ ವಿಷಯಗಳು ಸಿಗುವ ಅಪೂರ್ವ ಮಾಹಿತಿಗಳನ್ನು ಒದಗಿಸುತ್ತದೆ. ಇದರಲ್ಲಿನ ಬಹಳಷ್ಟು ಲೇಖನಗಳು ಶೈಕ್ಷಣಿಕ, ಧಾರ್ಮಿಕ ಹಾಗೂ ಐತಿಹಾಸಿಕ ನೆಲೆಯಲ್ಲಿವೆ. ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ, ಕಾಲೇಜು ಮತ್ತು ಸೆಕೆಂಡರಿ ಶಿಕ್ಷಣ ವ್ಯವಸ್ಥೆ ಹಾಗೂ ಶಾಲಾ ಕಾಲೇಕು ಪರೀಕ್ಷೆಗಳ ಕುರಿತಾದ ಮಾಹಿತಿಗಳಿದ್ದರೆ, ಧಾರ್ಮಿಕವಾಗಿ ಜೆಸ್ಕೂಟರ ಜೀವನ, ಸಾಧನೆ, ಸಾಬ್ಲೆಟ್‌ನ ಹುತಾತ್ಮರ ಹಾಗೂ ಪೂಜ್ಯ ಜೋಸೆಫ್ ವಾಸ್‌ ಬಗ್ಗೆ ಲೇಖನಗಳಿವೆ. ಐತಿಹಾಸವಾಗಿ ಫಾ. ಮಾಫಾಯಿಯವರ ದಕ್ಷಿಣ ಕನ್ನಡದ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ, ಜೆ. ಎ. ಸಲ್ದಾನರವರಿಂದ ಕೆನರಾದ ಇತಿಹಾಸ ಹಾಗೂ ಇತರ ಲೇಖನಗಳಿವೆ.

ಗುರುಪುರ ನದಿಗಿರುವ ಇನ್ನೊಂದು ಅಳಿವೆಗೆ ತಡೆಯೊಡ್ಡುವ ಯೋಜನೆಯನ್ನು ಸರಕಾರ ರೂ 10,000 ಖರ್ಚು ಮಾಡಿ ಕೈಗೆತ್ತಿಕೊಂಡಿತು. ಹಾಗೂ ಇದರಿಂದಾಗಿ ನದಿಗೆ ಒಂದು ಪ್ರಬಲ ಅಳಿವೆ ಉಳಿದಂತಾಗುತ್ತದೆ. ಕ್ರಿ.ಶ 1869ರಲ್ಲಿ ಗುರುಪುರ ನದಿಗೆ ನಿರ್ಮಿಸಲಾದ ಅಳಿವೆ ಟಿಪ್ಪು ಸುಲ್ತಾನ್ ಕಾಲದಲ್ಲಿ ರಚಿಸಲಾಗಿದ್ದ ಸುಲ್ತಾನ್ ಭತ್ತೇರಿಯ ಸ್ವಲ್ಪ ದಕ್ಷಿಣಕ್ಕೆ ಇತ್ತು. ಇದೊಂದು ಪ್ರಮುಖ ಆಮದು ರಫ್ತು ಕೇಂದ್ರವೆಂದು ಚಿತ್ರಿಸಲಾಗಿದೆ. ಈ ಬಂದರು ದಕ್ಷಿಣ ಭಾರತ ಮತ್ತು ಇಂಗ್ಲೆಂಡಿನ ಮಧ್ಯೆ ರಾಜಮಾರ್ಗಕ್ಕೆ ಕೊಂಡಿ ಎಂದು ಬಣ್ಣಿಸಲಾಗಿದೆ.

ಇದು ಒಂದು ಮಾಹಿತಿಯ ಮಾದರಿಯಾದರೆ, ಕಲ್ಯಾಣಪುರ, ಕಾರ್ಕಳ,

ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...