Page:ಮಂದಾರ ಕೇಶವ ಬಟ್ರ್.pdf/52

This page has been proofread.

ಮಂದಾರ ರಾಮಾಯಣದ ಮಿತ್ತ್ ತೆರಿದಿನಕ್ಲೆನ ಪುಗರ್ತೆ

ಮಹಾಕಾವ್ಯವೆಂಬ ಮನ್ನಣೆಗೆ ಅರ್ಹವಾದ ಕೃತಿ

- ಸೇಡಿಯಾಪು ಕೃಷ್ಣ ಭಟ್ಟ

ತುಳುವರು ಇದನ್ನು ಸ್ವರ್ಣ ಸಿಂಹಾಸನದಲ್ಲಿ ಓಲಗಿಸಿಯಾರೆಂಬ ವಿಶ್ವಾಸ ನನ್ನದು.

- ದಿ। ತೆಕ್ಕುಂಜ ಗೋಪಾಲಕೃಷ್ಣ ಭಟ್ಟ

ತುಳು ಸಾಹಿತ್ಯಕ್ಕೆ ಸಮೃದ್ಧಿಯನ್ನು ತಂದಿತ್ತ ನಿಧಿ.

- ಕಯ್ಯಾರ ಕಿಞ್ಞಣ್ಣ ರೈ

ತುಳುವಪ್ಪೆಗ್ ಇಂಚಿನ ದಿಂಜಿನ ಕುಂಕುಮೊದ ಕರಡ್ಡಿಗೆನ್ ಕೊರುದು ಅಲೆನ ಮುತ್ತೇಸಿ ಮುಂಡೊನು ಪುಲ್ಯಾನಗ ತೂಪಿನಂಗೆ ಮಲ್ತಿ ಬಿರ್ಸಮಗೆ ಬಟ್ರ್.

- ಕೆದಂಬಾಡಿ ಜತ್ತಪ್ಪ ರೈ

ಆಧುನಿಕ ಕಾಲದ ಯಾವುದೇ ಭಾಷೆಯ ಮಹಾಕಾವ್ಯಕ್ಕೆ ಸರಿಸಾಟಿ. ಇಲ್ಲಿನ ಜಾನಪದ ಸತ್ವ ತುಳುವಿನಲ್ಲಿ ಮೂಡಿ ಒಂದು ಅಪೂರ್ವ ಮಾಧುರ್ಯವನ್ನು ಸೃಷ್ಟಿಸಿದೆ.

- ಕು.ಶಿ. ಹರಿದಾಸ ಭಟ್ಟ

ತುಳುವಿನ ಕಂಪು ಸೊಂಪು ಪೆಂಪುಗಳನ್ನು ಮೈಗೂಡಿಸಿಕೊಂಡು ಮೂಡಿದ ಈ ರಾಮಾಯಣವು, ಫಣಿರಾಯನು ತಿಣುಕುವಂತೆ ಮಾಡದು. ಬದಲಾಗಿ ಅವನ ಹೆಡೆಯ ಮಣಿಯಾಗಿ ರಂಜಿಸಲಿದೆ.

- ಏರ್ಯ ಲಕ್ಷ್ಮೀನಾರಾಯಣ ಆಳ್ವ

ಈ ಕವಿ ತುಳು ಭಾಷೆಯನ್ನು ಭಾವಾಭಿವ್ಯಕ್ತಿಗೆ ಮಣಿಸಿಕೊಂಡ ರೀತಿ, ತುಳು ಭಾಷಾ ಸರಸ್ವತಿ ಅವರ ಲೆಕ್ಕಣಿಕೆಯಲ್ಲಿ ನಲಿದು ಬರುವ ರೀತಿ ವಿಸ್ಮಯಕರ.

- ಬನ್ನಂಜೆ ಗೋವಿಂದಾಚಾರ್ಯ

ತುಳು ಸಾಹಿತ್ಯದ ಹೊಸ ಆಯಾಮ ಮಂದಾರರ ಮಹಾಕಾವ್ಯ.

- ಬಿ.ಎ. ವಿವೇಕ ರೈ

ಅಪ್ಪಟ ತುಳು ಕಾವ್ಯ, ತುಳುವಿನ ಬನಿ, ಬಿರುಸು, ನೆಯ್ಮೆ, ನಲ್ಮೆ, ನಸೆ, ಪಸೆ, ಕೊಲ್ಮೆ,ಗೆಲ್ಮೆಗಳನ್ನು ತುಂಬಿಕೊಂಡಿರುವ ಇದು ತುಳುವಿನ ಸಾಹಿತ್ಯಕ ಸೌಭಾಗ್ಯ.

- ಅಮೃತ ಸೋಮೇಶ್ವರ


44